ಬೆಂಗಳೂರು: ಈಗಾಗಲೇ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬೀಜ ಬಿತ್ತನೆ ಮಾಡಿ, ಮಳೆಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಹವಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.
ಈ ಬಾರಿ ಅಂದುಕೊಂಡಂತೆ ಮುಂಗಾರು ಮಳೆ ಕಾಣಿಸಿಕೊಳ್ಳಲಿಲ್ಲ. ಭಾರತೀಯ ಹವಮಾನ ಸೂಚನೆ ನೀಡಿರುವ ವರದಿಯ ಪ್ರಕಾರ, ಮುಂಗಾರು ಮಳೆ ಸೆಪ್ಟೆಂಬರ್ 1 ರಿಂದ 7 ರ ತನಕ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎನ್ನಲಾಗಿದೆ. ಜೂನ್ ನಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 49.6 ಸೆಂಟಿ ಮೀಟರ್ ಮಳೆಯಾಗಿದೆ. ಅಂದ್ರೆ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿದೆ.
ರಾಜ್ಯದಲ್ಲಿ ಸೆಪ್ಟೆಂಬರ್ ನಲ್ಲಿ ಏಳು ದಿನಗಳ ಮಳೆಯಾಗುವುದರಿಂದ 5 ಎಂಎಂ ನಿಂದ 10 ಮೀಮೀ ಮಳೆಯಾಗಲಿದೆ. ಈ ಮೂಲಕ ಒಂದು ವಾರಗಳ ಕಾಲ ಮಳೆಯಾದರೆ ರೈತರು ಕೊಂಚ ಚೇತರಿಸಿಕೊಳ್ಳುವ ಮಟ್ಟಿಗೆ ಭೂಮಿ ಹಸಿಯಾಗುತ್ತದೆ.
ಮಾನ್ಸೂನ್ ಮಾರುತಗಳು ಹಿಮಾಲಯದ ತಪ್ಪಲಿಗೆ ಸ್ಥಳಾಂತರಗೊಂಡಿದೆ. ಇದು ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಕಡಿಮೆಯಾಗಲು ಕಾರಣವಾಗಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಆಂತರಿಕ ಕರ್ನಾಟಕ ಕ್ರಮವಾಗಿ 11% ಮತ್ತು 23% ನಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮಳೆಯಿಲ್ಲದ ಕಾರಣ ರಾಜ್ಯ ಸರ್ಕಾರ ಬರ ರಾಜ್ಯ ಎಂದು ಘೋಷಣೆ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದಿಂದ ಕೆಲವು ನಿಯಮಗಳ ಸಡಿಲಿಕೆ ಅಗತ್ಯವಿದೆ. ಇನ್ನು ಹೀಗೆ ಮಳೆ ಆಕಾಶಕ್ಕೆ ಸೇರಿದರೆ ತರಕಾರಿ, ಆಹಾರ ಪದಾರ್ಥಗಳು ಹೆಚ್ಚಾಗುವ ಸಾಧ್ಯತೆ ಇದೆ.