ನಟ ದರ್ಶನಗೆ ಯಾವಾಗ ಜಾಮೀನು? ಎಂಬ ಪ್ರಶ್ನೆಗೆ ಕೋಡಿಮಠದ ಶ್ರೀಗಳು ಹೇಳಿದ್ದು ಹೀಗೆ! 

1 Min Read

ರೇಣುಕಾಸ್ವಾಮಿ ಕೊಲೆ ಕೇಸ್​​ ನಲ್ಲಿ‌ ಜೈಲು ಪಾಲಾಗಿದ್ದಾರೆ ನಟ ದರ್ಶನ್. ಇದೀಗ ಕಾನೂನು ಹೋರಾಟ ಮುಂದುವರೆದಿದ್ದು, ದರ್ಶನ್​ಗೆ ಜಾಮೀನು ಇನ್ನೂ ದೊರೆತಿಲ್ಲ.  ದರ್ಶನ್ ಎಂದು ಬಿಡುಗಡೆ ಆಗುತ್ತಾರೆ ಎನ್ನುವ ಪ್ರಶ್ನೆ ಹಾಗೂ ಚಿಂತೆ ಕುಟುಂಬ ಹಾಗೂ  ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದೀಗ ಕೋಡಿಮಠದ ಶ್ರೀಗಳು ನಟ ದರ್ಶನ್​ ಬಗ್ಗೆ ಕೂಡ ಮಾತಾಡಿದ್ದಾರೆ.

ಕೊಲೆ ಆರೋಪಿಯಾಗಿರುವ ನಟ ದರ್ಶನ್ ಭವಿಷ್ಯದ ಬಗ್ಗೆ ಕೋಡಿಮಠದ ಸ್ವಾಮೀಜಿಗಳಿಗೆ ಪ್ರಶ್ನೆ ಕೇಳುತ್ತಿದ್ದಂತೆ, ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ವಿಚಾರ ಕೋರ್ಟ್​​ನಲ್ಲಿ ತೀರ್ಮಾನ ಆಗುತ್ತೆ.ಈಗ ದರ್ಶನ್ ಬಗ್ಗೆ ಮಾತಾಡಿದ್ರೆ ನ್ಯಾಯಲಯದ ವಿರುದ್ದ ನಾವು ಮಾತನಾಡಿದ ಹಾಗೆ ಆಗುತ್ತೆ. ಹೀಗಾಗಿ ಹೆಚ್ಚು ಮಾತಾಡಲ್ಲ, ದರ್ಶನ್ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ.

ಜೈಲಿಂದ ಹೊರ ಬಂದ ಬಳಿಕ ದರ್ಶನ್ ರಾಜಕೀಯಕ್ಕೆ ಬರ್ತಾರಾ ಎಂಬ ಪ್ರಶ್ನೆಗೆ ಮಾತಾಡಿದ ಕೋಡಿ ಮಠದ ಶ್ರೀಗಳು, ದರ್ಶನ್ ಹೊರ ಬಂದ ಮೇಲೆ ಇದರ ಬಗ್ಗೆ ನೋಡೊಣ ಎಂದಿದ್ದಾರೆ.

Share This Article