ಬೆಂಗಳೂರು: ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಸಂಪುಟ ವಿಸ್ತರಣೆಯಾಗಲಿದೆ. ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದೆ. ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಭರ್ತಿ ಮಾಡಲಾಗುತ್ತದೆ. ಹೈಕಮಾಂಡ್ ಸೂಚನೆಗಾಗಿಯೇ ಸಿಎಂ ಕಾಯುತ್ತಿದ್ದಾರೆ ಎನ್ನಲಾಗಿದೆ.

ಸಿಡಿ ಕೇಸ್ ನಿಂದಾಗಿ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 40% ಕಮಿಷನ್ ಆರೋಪದ ಮೇಲೆ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಾರಿ ಸಂಪುಟ ವಿಸ್ತರಣೆಯಾದರೆ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರನ್ನು ಪರು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಕನಿಷ್ಠ ಅವಧಿಗೆ ಸಚಿವರಾಗುವ ಬದಲು ಕೆಲವರ ಒಲವು ಸಭಾಪತಿ ಸ್ಥಾನದ ಕಡೆ ನೆಟ್ಟಿದೆ ಎನ್ನಲಾಗಿದೆ. ಬಸವರಾಜ್ ಹೊರಟ್ಟಿ ಸಭಾಪತಿಯಾಗುವ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಇನ್ನು ರಘುನಾಥ್ ರಾವ್ ಮಲ್ಕಾಪುರೆಗೆ ಸಚಿವ ಸ್ಥಾನ ನೀಡಲು ಫ್ಲ್ಯಾನ್ ನಡಿತಿದೆ ಎನ್ನಲಾಗಿದೆ. ಕಲ್ಯಾಣ ಕರ್ನಾಟಕ ಕೋಟಾ ಭರ್ತಿ ಮಾಡುವ ಲೆಕ್ಕಚಾರ ನಡೆಯುತ್ತಿದೆ ಎನ್ನಲಾಗಿದೆ.

