ನಾನು ಸಿಎಂ ಆಗಿದ್ದಾಗ ಬೆಂಕಿ ಹಚ್ಚೊ ಕಡಲಸ ಮಾಡಿರಲಿಲ್ಲ : ಕುಮಾರಸ್ವಾಮಿ ಹಿಂಗ್ಯಾಕಂದ್ರು..?

suddionenews
1 Min Read

 

 

ನವದೆಹಲಿ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಒಬ್ಬರಿಗೊಬ್ಬರು ಮಾತಿನ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದೆಹಲಿಯಿಂದಾನೇ ಬೆಂಕಿ ಹಚ್ಚುವ ಕೆಲಸವನ್ನ ನಾನು ಮಾಡಿಲ್ಲ ಅಂತ ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ್ ಅವರು ನೀಡಿದ ಹೇಳಿಕೆಗೆ ಆಕ್ರೋಶಗೊಂಡಿರುವ ಕುಮಾರಸ್ವಾಮಿ ಅವರು, ನಾಗಮಂಗಲದ ಘಟನೆಯನ್ನು ಸಣ್ಣ ಘಟನೆ ಅಂತ ಹೇಳುತ್ತಾರೆ. ಪೆಟ್ರೋಲ್ ಬಾಂಬ್ ಗಳನ್ನು ಎಸೆದದ್ದು ಸಣ್ಣ ಘಟನೆನಾ..? ತಲವಾರ್ ಗಳನ್ನ ಹಿಡಿದು ಓಡಾಡಿದ್ದು ಸಣ್ಣ ಘಟನೇನಾ..? ಇಂಥಾ ಗೃಹ ಸಚಿವರು ರಾಜ್ಯದಲ್ಲಿ ಇರೋದು ದುರಾದೃಷ್ಟ‌. ಕಾಂಗ್ರೆಸ್ ನಾಯಕರು ನಮಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ನಾನ್ಯಾವತ್ತು ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ನಾಗಮಂಗಲದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ, ಚಪ್ಪಲಿ ತೂರಾಟ ನಡೆದಿದೆ.

ಇದು ಮಂಡ್ಯ ಜಿಲ್ಲೆಯಲ್ಲಿಯೇ ನಡೆದಿರುವ ಮೊದಲ ಪ್ರಕರಣ ಇದಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದು ವರ್ಗವನ್ನು ಓಲೈಸಿದ್ದು ಈ ರೀತಿ ಘಟನೆಯಾಗಿದೆ. 30ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಇಂತಹ ದೊಡ್ಡ ಘಟನೆಯನ್ನು ರಾಜ್ಯದ ಗೃಹ ಸಚಿವರು ಚಿಕ್ಕ ವಿಚಾರ ಎಂದಿರುವುದು ದುರದೃಷ್ಟಕರ. ಎರಡು ಬಾರಿ ನಾನು ಕೂಡ ಸಿಎಂ ಆಗಿದ್ದೇನೆ. ಎಂದೂ ಸಹ ಬೆಂಕಿ ಹಚ್ಚುವ ಕೆಲಸವನ್ನು ನಾನು ಮಾಡಿಲ್ಲ. ಬೆಂಕಿಯನ್ನು ಆರಿಸುವ ಕೆಲಸವನ್ನು ಮಾಡಿದ್ದೇನೆ. ಎಲ್ಲಾ ಪಕ್ಷದವರು ಗಣೇಶನ ಮೆರವಣಿಗೆಯಲ್ಲಿ ಭಾಗಿಯಾಗಿದ್ರು. ನಾನು ಇದರಲ್ಲಿ ರಾಜಕೀಯ ಮಾಡುತ್ತಿಲ್ಲ. ನಾಳೆ ಬೆಳಗ್ಗೆ 7 ಗಂಟೆಗೆ ನಾಗಮಂಗಲಕ್ಕೆ ಹೋಗುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *