ಅಪ್ಪು ವಾಯ್ಸ್ ಅಂದ್ರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಥೇಟ್ ಅಣ್ಣಾವ್ರ ರೀತಿಯೇ. ಕಲೆಯಲ್ಲಾಗಲೀ ಹಾಡಲ್ಲಾಗಲೀ.. ಅಣ್ಣಾವ್ರ ರೀತಿಯಲ್ಲಿಯೇ. ಅಪ್ಪು ಕಂಠ ಸಿರಿಯಲ್ಲಿ ಸಾಕಷ್ಟು ಸಾಂಗ್ಸ್ ಗಳು ಮೂಡಿ ಬಂದಿದೆ. ಆದರೆ ಅಪ್ಪು ಸಿಂಗರ್ ಆಗಿರುವುದರ ಹಿಂದೆ ಒಂದು ದೊಡ್ಡ ಕಥೆ ಇದೆ. ಆ ಕಥೆಯನ್ನು ರಾಘವೇಂದ್ರ ರಾಜ್ಕುಮಾರ್ ಬಿಚ್ಚಿಟ್ಟಿದ್ದಾರೆ.
ಅಕ್ಟೋಬರ್ 18ರಂದು ಪುನೀತ್ ರಾಜ್ಕುಮಾರ್ ಕನಸಿನ ಕೂಸು ಗಂಧದ ಗುಡಿ ರಿಲೀಸ್ ಆಗುತ್ತಿದೆ. ಇವತ್ತು ಪ್ರಿರಿಲೀಸ್ ಇವೆಂಟ್ ಬೃಹತ್ ವೇದಿಕೆಯಲ್ಲಿ ನಡೆಯುತ್ತಿದೆ. ಈ ವೇದಿಕೆಯಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಒಂದು ಸ್ಪೆಷಲ್ ವಿಚಾರವನ್ನು ತಿಳಿಸಿದ್ದಾರೆ. ಮೊದಲ ಹಾಡು ಹಾಡಿದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ.
ವೇದಿಕೆ ಮೇಲೆ ಬಂದು ಕುಳಿತ ರಾಘಣ್ಣ, ಹಾಗೇ ಅಪ್ಪು ಮತ್ತು ಅಣ್ಣಾವ್ರ ವಿಚಾರಕ್ಕೆ ಜಾರಿದ್ದರು. ಒಂದು ಸಿನಿಮಾಗೆ ಅಪ್ಪು ಹಾಡಬೇಕೆಂದು ನಿರ್ಧಾರವಾಯ್ತು. ಆದ್ರೆ ಅದೇ ಸಮಯಕ್ಕೆ ಅಪ್ಪಾಜಿಗೆ ಶೂಟಿಂಗ್ ಇತ್ತು. ಅಪ್ಪಾಜಿ ಅಪ್ಪುನನ್ನು ಬಿಟ್ಟು ಶೂಟಿಂಗ್ ಗೆ ಹೋದರೂ. ಆದರೂ ಅವರಿಗೆ ಅಲ್ಲಿ ಮನಸ್ಸೇ ಇರಲಿಲ್ಲ. ಪದೇ ಪದೇ ಕರೆ ಮಾಡುತ್ತಾ ಇದ್ರು. ಫೈನಲಿ ಅಪ್ಪು ಹಾಡು ಹಾಡಿ ಮುಗಿಸಿದ್ದ.
ಅಪ್ಪಾಜಿ ಮನೆಗೆ ಬಂದು ಅಮ್ಮನನ್ನು ಕೇಳಿದರು. ಹಾಡು ಹಾಡಿದನಾ ಅಂತ. ಆಗ ಅಮ್ಮ ಅಪ್ಪು ಹಾಡಿದ ವಿಡಿಯೋ ತೋರಿಸಿದರು. ಅದೇ ಸಮಯಕ್ಕೆ ಅಪ್ಪು ನಿದ್ದೆಯಿಂದ ಎದ್ದು ಬಂದು ಅಪ್ಪಾಜಿ ತೊಡೆ ಮೇಲೆ ಕೂತಿದ್ದ. ಹಾಡು ಹಾಡಿದ ಅಂತ ಅಪ್ಪಾಜಿ ಕೇಳಿದಾಗ, ಅವರೇ ಹಾಡಿಸಿದರು ಅಂತ ಹೇಳಿದ್ದ. ಹಾಡನ್ನು ನೋಡುವಾಗ ಹಾಗೇ ಅಪ್ಪು ಮಲಗಿಬಿಟ್ಟಿದ್ದ ಅಂತ ಹೇಳಿ ರಾಘಣ್ಣ ಅಂದಿನ ದಿನವನ್ನು ನೆನೆದಿದ್ದಾರೆ. ಬಳಿಕ ಅಪ್ಪುಗಾಗಿ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡನ್ನು ಹಾಡಿ ರಂಜಿಸಿದ್ದಾರೆ.