ವಾಟ್ಸಾಪ್ ಗೂ ಬಡಿದಿದೆ ಗ್ರಹಣ : ಮೆಸೇಜ್ ಕಳಿಸಲಾಗದೇ ಬಳಕೆದಾರರ ಪರದಾಟ…!

ಸುದ್ದಿಒನ್ ವೆಬ್ ಡೆಸ್ಕ್

ಇಂದು ಗ್ರಹಣವಿದೆ. ಆದರೆ ಇದೀಗ ವಾಟ್ಸಾಪ್ ಗೂ ಗ್ರಹಣ ಬಡಿದಿದೆ.
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಸೇವೆಗಳು ಮಂಗಳವಾರ ವ್ಯತ್ಯಯಗೊಂಡಿವೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಾಟ್ಸಾಪ್ ಬಳಕೆದಾರರು ತೊಂದರೆ ಎದುರಿಸುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಅಕ್ಟೋಬರ್ 25 ರಂದು ಮಧ್ಯಾಹ್ನ 12:30 ರಿಂದ ದೇಶಾದ್ಯಂತ ವಾಟ್ಸಾಪ್ ಸೇವೆಗಳು ಸ್ಥಗಿತಗೊಂಡಿವೆ. ವಾಟ್ಸಾಪ್ ಸಂದೇಶ ಕಳುಹಿಸಲು ಆಗಿಲ್ಲ, ವಿಡಿಯೋ ಕಾಲ್, ವಾಟ್ಸಾಪ್ ಸ್ಟೇಟಸ್ ಕೂಡ ನೋಡಲು ಆಗದಷ್ಟು ಸಮಸ್ಯೆ ಉಂಟು ಮಾಡಿದೆ.
ಬಳಕೆದಾರರು ಕಳುಹಿಸಿದ ಸಂದೇಶಗಳು ತಲುಪಿದ ಸ್ಥಿತಿಯನ್ನು WhatsApp ತೋರಿಸುತ್ತಿಲ್ಲ.  WhatsApp ನಲ್ಲಿ ಡಬಲ್ ಟಿಕ್ ಮತ್ತು ನೀಲಿ ಟಿಕ್ ಗುರುತುಗಳು ಕಾಣಿಸುತ್ತಿಲ್ಲ.

ಸಂದೇಶವನ್ನು ಕಳುಹಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ವೆಬ್‌ಸೈಟ್‌ನಲ್ಲಿ ಈ ಸಮಸ್ಯೆಯ ಬಗ್ಗೆ ಸಾವಿರಾರು ಬಳಕೆದಾರರು ಈಗಾಗಲೇ ದೂರು ನೀಡಿದ್ದಾರೆ. ದೂರಿನಲ್ಲಿ, ಕೆಲವು ಬಳಕೆದಾರರು ಸಂದೇಶಗಳನ್ನು ಕಳುಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಇತರರು ಸರ್ವರ್ ಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ನೀಲಿ ಟಿಕ್ ಗೋಚರಿಸುವುದಿಲ್ಲ.
ಮತ್ತೊಂದೆಡೆ, WhatsApp ಬಳಕೆದಾರರು ಟ್ವಿಟರ್‌ನಲ್ಲಿ ‘Whatsapp Down’ (#Whatsapp Down) ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಿದ್ದಾರೆ.

https://twitter.com/imAmanDubey/status/1584806896707731459?t=0JLjfRgRVZJhZsReEO5JJQ&s=19

ಮೆಟಾ ಕಂಪನಿ ವಕ್ತಾರರು ಟ್ವೀಟ್ ಮಾಡಿದ್ದು, ಕೆಲವು ಮಂದಿ ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವ ವಿಚಾರ ತಿಳಿದುಬಂದಿದೆ. ಸಾಧ್ಯವಾದಷ್ಟು ಬೇಗ ವಾಟ್ಸಾಪ್‌ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *