ವಾಟ್ಸಾಪ್ ಚಾನೆಲ್ : ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದ ಪ್ರಧಾನಿ ಮೋದಿ…!

PM Modi WhatsApp Channel : ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ  ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ವಾಟ್ಸ್‌ಆ್ಯಪ್‌ ಚಾನೆಲ್‌ನಲ್ಲೂ ಸುದ್ದಿ ಹರಿದಾಡಿತ್ತು. ಪ್ರಧಾನಿ ಮೋದಿ ತಮ್ಮ ವಾಟ್ಸಾಪ್ ಚಾನೆಲ್ ಆರಂಭಿಸಿದ ಒಂದೇ ದಿನದಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. 

ಈಗಾಗಲೇ X(Twitter), Facebook, Instagram ನಲ್ಲಿ ದಾಖಲೆಯ ಫಾಲೋವರ್ಸ್ (Followers) ಪಡೆದಿದ್ದಾರೆ.
ಇದೀಗ ವಾಟ್ಸಾಪ್ ಚಾನೆಲ್‌ನಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿರುವುದು ಮತ್ತೊಂದು ವಿಶೇಷವಾಗಿದೆ.

91 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ಮೋದಿ X ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯರಾಗಿದ್ದಾರೆ. ಫೇಸ್‌ಬುಕ್‌ನಲ್ಲಿ, ಪಿಎಂ ಮೋದಿ 48 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 78 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾಟ್ಸಾಪ್ ಚಾನೆಲ್‌ಗಳಿಗೆ ಸೇರ್ಪಡೆಗೊಂಡಿದ್ದು ಗೊತ್ತೇ ಇದೆ. ವಾಟ್ಸಾಪ್ ಚಾನೆಲ್‌ಗೆ ಸೇರ್ಪಡೆಯಾಗಲು ಸಂತೋಷವಾಗುತ್ತಿದೆ ಎಂದು ಮೋದಿ ಹೊಸ ಸಂಸತ್ ಕಟ್ಟಡದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 13 ರಂದು, ಭಾರತವನ್ನು ಹೊರತುಪಡಿಸಿ, WhatsApp 150 ದೇಶಗಳಲ್ಲಿ ಚಾನೆಲ್ಗಳನ್ನು ಪ್ರಾರಂಭಿಸಿತು.

Share This Article
Leave a Comment

Leave a Reply

Your email address will not be published. Required fields are marked *