ಧಾರವಾಡ: ಕೆಲವೊಂದು ಕಡೆ ವಿಶೇಷತೆಯೂ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುತ್ತದೆ. ರಾಜ್ಯದ ಭವಿಷ್ಯವನ್ನು ನುಡಿಯಲಾಗುತ್ತದೆ. ಇದೀಗ ಯುಗಾದಿಯಂದು ಧಾರವಾಡ ತಾಲೂಕಿನ ಹನುಮಕೊಪ್ಪದಲ್ಲಿ ಬೊಂಬೆಗಳು ಭವಿಷ್ಯ ನುಡಿಯಲಿವೆ. ಆ ಭವಿಷ್ಯದ ಮೇಲೆ ಎಲ್ಲರ ಗಮನವಿರುತ್ತದೆ. ಈ ಬಾರಿಯ ಯುಗಾದಿಯಂದು ಭವಿಷ್ಯ ನುಡಿಯಲಾಗಿದೆ. ರಾಜಕೀಯ, ಮಳೆ, ಬೆಳೆ ಬಗ್ಗೆ ಭವಿಷ್ಯ ನುಡಿಯಲಾಗಿದೆ.
ಈ ಬಾರಿಯೂ ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿಯೇ ಆಗಲಿದೆ. ಹಿಂಗಾರು ಮಳೆ ಕೂಡ ಕೈ ಕೊಡಲಿದೆ ಎಂದಿವೆ. ಇದನ್ನು ಕೇಳಿದ ರೈತರಿಗೆ ಬೇಸರವಾಗಿದೆ. ಯಾಕಂದ್ರೆ ಈ ಬಾರಿಯಾದರೂ ಒಳ್ಳೆಯ ಮಳೆ ಬೆಳೆ ಆಗುತ್ತದೆ ಎಂದೇ ನಂಬಲಾಗಿತ್ತು. ಇದೀಗ ಬೊಂಬೆಗಳ ಭವಿಷ್ಯ ಆತಂಕಕ್ಕರ ದೂಡಿದೆ. ಇದೇ ವೇಳೆ ರಾಜಕೀಯದ ವಿಚಾರವಾಗಿಯೂ ಭವಿಷ್ಯ ನುಡಿದಿದ್ದು, ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗುವುದಿಲ್ಲ ಎಂಬ ಭವಿಷ್ಯ ನುಡಿದಿದೆ.
ಹನುಮಕೊಪ್ಪ ಗ್ರಾಮದಲ್ಲಿ ಯುಗಾದಿಯ ಅಮಾವಾಸ್ಯೆಯಂದು ಹಳ್ಳದಲ್ಲಿ ಗೊಂಬೆಗಳನ್ನು ಕಟ್ಟಲಾಗುತ್ತದೆ. ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಕಟ್ಟಲಾಗುತ್ತದೆ. ಬಲಿಪಾಡ್ಯಮಿಯ ದಿನ ಹಿರಿಯರು ಬಂದು ಆ ಗೊಂಬೆಗಳನ್ನು ಅವಲೋಕಿಸುತ್ತಾರೆ. ಆ ಗೊಂಬೆಗಳನ್ನು ನೋಡಿದಾಗ ರೈತರ ಜೀವನ, ಮಳೆ ಬೆಳೆ ಬಗ್ಗೆ, ರಾಜಕೀಯದ ಬಗ್ಗೆ ಭವಿಷ್ಯವನ್ನು ತಿಳಿಯುತ್ತಾರೆ. ಈ ಬಾರಿ ರಾಜಕೀಯ ಗೊಂಬೆ ಯಾವುದೇ ರೀತಿಯಲ್ಲೂ ಬದಲಾವಣೆಯಾಗಿರಲಿಲ್ಲ. ಗೊಂಬೆಗಳ ಅಂಗಾಗಕ್ಕೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಅರ್ಥ. ಆದರೆ ಈ ಬಾರಿ ಯಾವುದೇ ವ್ಯತ್ಯಾಸವಾಗಿಲ್ಲದ ಕಾರಣ ರಾಜಕೀಯದಲ್ಲಿ ಬದಲಾವಣೆ ಇಲ್ಲ ಎಂದೇ ನಂಬಲಾಗಿದೆ. 1936ರಿಂದಾನೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಾಗೇ ಎಷ್ಟೋ ಘಟನೆಗಳು ಸತ್ಯವಾಗಿದೆ ಅಂತೆ.