ಮಂಡ್ಯ: ಒಂದು ಕಡೆ ವಿಪಕ್ಷಗಳೆಲ್ಲಾ ಒಗ್ಗಟ್ಟಾಗಿ ಈ ಬಾರಿ ಬಿಜೆಪಿಯನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಿವೆ. ಇದೀಗ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಹೊರಟಿದೆ. ಈ ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ, ಈ ಬಾರಿಯ ಲೋಕಸಭಾ ಚುನಾವಣೆಯ ಕಾವು ಜೋರಾಗಿರುತ್ತದೆ. ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ವಿಚಾರ ಬಾರಿ ಚರ್ಚೆಗೆ ಗ್ರಾಸವಾಗಿದೆ.
ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ದೇವೇಗೌಡರ ನಡುವಿನ ಮಾತುಕತೆ ಮೈತ್ರಿ ಮಾಡಿಕೊಳ್ಳುವುದು ಖಚಿತ ಎಂದೇ ಹೇಳುತ್ತಿದೆ ಮೂಲಗಳು. ಅಧಿಕೃತವಾಗಿ ಮತ್ತೊಂದು ಸಭೆಯ ಬಳಿಕ ಘೋಷಣೆ ಮಾಡಬಹುದು. ಒಂದು ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದರೆ ಸಂಸದೆ ಸುಮಲತಾಗೆ ಸಂಕಷ್ಟ ತಪ್ಪಿದ್ದಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ವಾಭಿಮಾನದ ಮತಗಳಿಂದ ಗೆಲುವು ಸಾಧಿಸಿದ್ದರು. ಅದಷ್ಟೇ ಅಲ್ಲ, ಜೆಡಿಎಸ್ ಮತ್ತು ಸುಮಲತಾ ನಡುವೆ ದೊಡ್ಡ ಯುದ್ಧವೇ ನಡೆದು ಕಡೆಗೆ ಸುಮಲತಾ ಗೆಲುವು ಸಾಧಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸಂಸದೆಯಾಗಿದ್ದರು. ಇತ್ತಿಚೆಗೆ ಸುಮಲತಾ ಬಿಜೆಪಿ ಪಕ್ಷ ಬೇರೆ ಸೇರಿದ್ದಾರೆ. ಈಗ ಮೈತ್ರಿ ಎಂದರೆ, ಜೆಡಿಎಸ್ ಅದು ಮಂಡ್ಯ ಕ್ಷೇತ್ರ ಬಿಟ್ಟು ಕೊಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಸುಮಲತಾ ಅವರಿಗೆ ಈ ಬಾರಿಯ ಲೋಕಾಭಾ ಚುನಾವಣೆಯ ಟಿಕೆಟ್ ಕಷ್ಟ ಸಾಧ್ಯವಾಗಲೂ ಬಹುದು.
ಈ ಮೈತ್ರಿ ಬಗ್ಗೆ ಮಾತನಾಡಿರುವ ಸಂಸದೆ ಸುಮಲತಾ, ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತ ಮಾಹಿತಿ ಬರಬೇಕು. ಕ್ಷೇತ್ರ ಹಂಚಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಅಧಿಕೃತವಾಗಿ ಮಾತನಾಡಿಲಿ. ಸದ್ಯಕ್ಕೆ ನಾನು ಆ ಟಾಪಿಕ್ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.