ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ವಿಚಾರವಾಗಿ ಕಾಂಗ್ರೆಸ್ ಪಕ್ಷ ಪೇಸಿಎಂ ಅಭಿಯಾನ ಆರಂಭಿಸಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿಯೇ ಸಾಗಿತ್ತು. ಇದೋಗ ಈ ವಿಚಾರದ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೇಸಿಎಂ ಅಭಿಯಾನ ನಡೆಯುವ ತನಕ ಸರ್ಕಾರ ಏನು ಮಾಡುತ್ತಿತ್ತು..? ಈ ಅಭಿಯಾನದ ವಿಚಾರ ಮೊದಲೇ ಯಾಕೆ ತಿಳಿಯಲಿಲ್ಲ. ಪೇ ಸಿಎಂ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ ಪೇಸಿಎಂ ಕೌಂಟರ್ ನಲ್ಲಿ ಸಿಎಂ ಮತ್ತು ಟೀಂ ವಿಫಲವಾಗಿದೆ. ಎಲೆಕ್ಷನ್ ಸಮಯದಲ್ಲಿ ಸಚಿವರು ಮತ್ತು ನಾಯಕರ ಸಪ್ಪೆ ವರ್ತನೆ ಯಾಕೆ ಎಂದು ಪ್ರಶ್ನಿಸಿದ್ದಾರೆ.