ಭಾರತ್-ಪಾಕ್ ಪಂದ್ಯ ಶುರುವಾಗೋದು ಎಷ್ಟು ಗಂಟೆಗೆ..? ಪಂದ್ಯದ ಬಗ್ಗೆ ನಿಮಗೆ ಬೇಕಾದ ಮಾಹಿತಿ ಇಲ್ಲಿದೆ

ಇಡೀ ವಿಶ್ವವೇ ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ನ್ಯೂಯಾರ್ಕ್ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಟೀಂ ಇಂಡಿಯಾ ಐರ್ಲೆಂಡ್ ನೊಂದಿಗೆ ಭರ್ಜರಿ ಜಯ ಗಳಿಸಿ ಶುಭಾರಂಭ ಮಾಡಿದೆ. ಅದೇ ರೀತಿ ಪಾಕ್ ವಿರುದ್ಧವೂ ಗೆಲುವು ಕಾಣಬೇಕು ಎಂಬುದೇ ಎಲ್ಲರ ಆಶಯ. ಭಾರತ ಹಾಗೂ ಪಾಕಿಸ್ತಾನದ ಮ್ಯಾಚ್ ಯುಎಸ್ಎ ಸಮಯದ ಪ್ರಕಾರ ಅಲ್ಲಿ ಬೆಳಗ್ಗೆಯೇ ಶುರುವಾಗಲಿದೆ. ಆದರೆ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈ ಪಂದ್ಯವನ್ನು ಮಾಮೂಲಿಯಂತೆ ಲೈವ್ ಕೂಡ ನೋಡಬಹುದುಮ. ಸ್ಟಾರ್ ಸ್ಪೋರ್ಟ್ಸ್ ನ ಚಾನೆಲ್ ಗಳಲ್ಲಿ ಭಾರತ ಹಾಗೂ ಪಾಕಿಸ್ತಾನದ ಮ್ಯಾಚ್ ಲೈವ್ ಸಿಗಲಿದೆ.

ಭಾರತದ ತಂಡದಲ್ಲಿ ಆಟಗಾರರು ಈ ರೀತಿ ಇದ್ದಾರೆ:
ರೋಹಿತ್ ಶರ್ಮಾ (ನಾಯಕ)
ಹಾರ್ದಿಕ್ ಪಾಂಡ್ಯ (ಉಪನಾಯಕ)
ಯಶಸ್ವಿ ಜೈಸ್ವಾಲ್
ವಿರಾಟ್ ಕೊಹ್ಲಿ
ಸೂರ್ಯಕುಮಾರ್ ಯಾದವ್
ರಿಷಭ್ ಪಂತ್
ಸಂಜು ಸ್ಯಾಮ್ಸನ್
ಶಿವಂ ದುಬೆ
ರವೀಂದ್ರ ಜಡೇಜಾ
ಅಕ್ಸರ್ ಪಟೇಲ್
ಕುಲ್ದಿಪ್ ಯಾದವ್
ಯಜುವೇಂದ್ರ ಚಹಲ್
ಅರ್ಷದೀಪ್ ಸಿಂಗ್
ಮೊಹಮ್ಮದ್ ಸಿರಾಜ್
ಜಸ್ ಪ್ರೀತ್ ಬೂಮ್ರಾ ತಂಡದಲ್ಲಿದ್ದಾರೆ.

ಅದರಂತೆ ಮೀಸಲು ಆಟಗಾರರು ಇದ್ದು, ಶುಭಮನ್ ಗಿಲ್, ಅವೇಶ್ ಖಾನ್, ಖಲೀಲ್ ಅಹ್ಮದ್ ಇದ್ದಾರೆ.

ಇನ್ನು ಪಾಕಿಸ್ತಾನ ತಂಡದಲ್ಲಿ:
ಬಾಬರ್ ಅಝಂ (ನಾಯಕ)
ಅಬ್ರಾರ್ ಅಹ್ಮದ್
ಅಝಂ ಖಾನ್
ಫಖರ್ ಝಮಾನ್
ಹ್ಯಾರಿಸ್ ರೌಫ್
ಇಫ್ತಿಕರ್ ಅಹ್ಮದ್
ಇಮಾದ್ ವಾಸಿಂ
ಅಬ್ಬಾಸ್ ಅಫ್ರಿದಿ
ಮೊಹಮ್ಮದ್ ಅಮೀರ್
ಮೊಹಮ್ಮದ್ ರಿಝ್ವಾನ್
ನಸೀಮ್ ಶಾ
ಸೈಮ್ ಅಯೂಬ್
ಶಾದಾಬ್ ಖಾನ್
ಶಾಹೀನ್ ಶಾ ಅಫ್ರಿದಿ
ಉಸ್ಮಾನ್ ಖಾನ್

Share This Article
Leave a Comment

Leave a Reply

Your email address will not be published. Required fields are marked *