ಚಂದ್ರಗ್ರಹಣದ ಸಂಧರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಶಾಸ್ತ್ರ ಹೀಗೆ ಹೇಳುತ್ತದೆ

1 Min Read

ಹೋಳಿ ಮಾಸದ ಈ ಪೌರ್ಣಮಿಯಂದು ಬರುವ ಚಂದ್ರಗ್ರಹಣವು ವಿಶೇಷ ಮಹತ್ವವನ್ನು ಹೊಂದಿದೆ.ನೆರಳು ಚಂದ್ರನನ್ನು ಆವರಿಸುವ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇದು ಕೇವಲ ಒಂದು ಖಗೋಳ ಘಟನೆಯಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನೆಲ್ಲ ಇದೆ ನೋಡಿ.ಗ್ರಹಣದ ಆರಂಭಕ್ಕೆ ಸುಮಾರು 9 ಗಂಟೆಗಳ ಮುಂಚಿತವಾಗಿಯೇ ‘ಸೂತಕ ಅವಧಿ’ ಆರಂಭವಾಗುತ್ತದೆ. ಈ ಅವಧಿಯಲ್ಲಿ ದೇವಾಲಯಗಳ ಬಾಗಿಲುಗಳು ಮುಚ್ಚಲ್ಪಡುತ್ತವೆ, ಮಂಗಳ ಕಾರ್ಯಗಳು ಸ್ಥಗಿತಗೊಳ್ಳುತ್ತವೆ.

ಶಾಸ್ತ್ರಗಳ ಪ್ರಕಾರ, ಗ್ರಹಣ ಕಾಲದಲ್ಲಿ ಕೈಗೊಳ್ಳುವ ಪ್ರಯಾಣವು ಅಡೆತಡೆಗಳಿಂದ ಕೂಡಿರಬಹುದು ಅಥವಾ ಮನಸ್ಸಿನಲ್ಲಿ ಅನಗತ್ಯ ಆತಂಕವನ್ನು ಉಂಟುಮಾಡಬಹುದು. ಒಂದು ವೇಳೆ ಪ್ರಯಾಣ ಅನಿವಾರ್ಯವಾದರೆ ಏನು ಮಾಡಬೇಕು? ಅಂತಹ ಸಂದರ್ಭಗಳಲ್ಲಿ ಧರ್ಮಗ್ರಂಥಗಳು ಭಕ್ತಿಯ ಮಾರ್ಗವನ್ನು ಸೂಚಿಸುತ್ತವೆ. ಮನೆಯಿಂದ ಹೊರಡುವ ಮುನ್ನ ಇಷ್ಟದೈವವನ್ನು ಸ್ಮರಿಸಿ, ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳನ್ನು ಇಟ್ಟುಕೊಳ್ಳಬೇಕು. ಪ್ರಯಾಣ ಮುಗಿಸಿ ಮನೆಗೆ ಬಂದ ನಂತರ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ಪ್ರಾರ್ಥನೆ ಸಲ್ಲಿಸುವುದರಿಂದ ಗ್ರಹಣದ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ ಎಂಬ ವಿಶ್ವಾಸವಿದೆ.

ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಮನೆಯಿಂದ ಹೊರಬರದೇ ಒಳಗಿರಬೇಕು. ಮಕ್ಕಳು ಆಟವಾಡಲು ಹೊರಹೋಗುವುದನ್ನು ತಪ್ಪಿಸಬೇಕು. ಇಂತಹ ಸಮಯದಲ್ಲಿ ಅನಾವತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ದೊಡ್ಡವರು ಮಕ್ಕಳ ಪಕ್ಕದಲ್ಲಿ ಕುಳಿತು ಧ್ಯಾನ, ದೀಪ ಪೂಜೆಗಳನ್ನು ಮಾಡುವುದರಿಂದ ಬಹಳ ವಿಶೇಷ ಫಲ ದೊರೆಯುತ್ತದೆ

ಶಾಸ್ತ್ರ ಪ್ರಕಾರ ಕೆಲ ರಾಶಿಗಳಿಗೆ ಈ ಗ್ರಹಣ ಅತ್ಯಂತ ಶುಭಕರವಾಗಿರುತ್ತದೆ. ವಿಶೇಷವಾಗಿ ಮಿಥುನ, ತುಲಾ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಈ ಗ್ರಹಣ ಮಹಾ ಅನುಕೂಲಕರ ಫಲಗಳನ್ನು ನೀಡಲಿದೆ.

Share This Article
Enable Notifications OK No thanks