ಬೆಂಗಳೂರು: ಸದ್ಯ ಕೊರೊನಾ ಹೆಚ್ಚಳದ ಯಾವ ಭಯವೂ ಕಾಣುತ್ತಿಲ್ಲ. ಹೀಗೆ ಸಹಜ ಸ್ಥಿತಿಯಲ್ಲೇ ಇದ್ದರೆ ಎಲ್ಲರೂ ಜೀವನ ಮಾಡಬಹುದು. ಆದ್ರೆ ಸಾಲು ಸಾಲು ಹಬ್ಬಗಳು ಇರುವುದರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತೆ.
ಹೀಗಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಕೊರೊನಾ ಹೆಚ್ಚಳವನ್ನ ತಡೆಯಲು ಸರ್ಕಾರ ಮುಂದಾಗಿದ್ದು, ಆದೇಶದಲ್ಲಿ ಎಚ್ಚರಿಕೆಯನ್ನು ನೀಡಿದೆ.
ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಕೊರೊನಾದಿಂದಾಗಿ ಎರಡು ವರ್ಷಗಳಿಂದ ಯಾವ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡೋದಕ್ಕೆ ಸಾಧ್ಯವೇ ಆಗಿಲ್ಲ. ಈ ಬಾರಿ ಕೊರೊನಾ ತಗ್ಗಿರುವ ಕಾರಣ ದೀಪಾವಳಿ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಬೇಕೆಂಬ ಬಯಕೆ ಎಲ್ಲರಲ್ಲೂ ಇತ್ತು. ಆದ್ರೆ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದೆ.
ಸಾಲು ಸಾಲು ಹಬ್ಬಗಳ ಹಿನ್ನೆಲೆ ಜನಸಂದಣಿ ಹೆಚ್ಚಾಗುತ್ತೆ. ಈ ವೇಳೆ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ದೀಪಾವಳಿ ಹಬ್ಬವನ್ನ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.