ರಾಮನಗರ: ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ಬೇಕು ಅಂತ ಹೇಳಿ ಸಂಚಲನವನ್ನೇ ಸೃಷ್ಟಿ ಮಾಡಿದ್ದರು. ಆ ಹೇಳಿಕೆಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟೀಸ್ ಕೂಡ ನೀಡಿತ್ತು. ಇದೀಗ ರಂಭಾಪುರಿ ಶ್ರೀಗಳ ಹೇಳಿಕೆಗೆ ಸಾಥ್ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಗೆ ಉನ್ನತ ಸ್ಥಾನ ಸಿಗಬೇಕು ಎಂಬ ಹೇಳಿಕೆಯನ್ನ ನೀಡಿದ್ದರು. ಈಗ ಆ ಹೇಳಿಕೆ ಸಂಬಂಧ ಇಕ್ಬಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಗಳು ಹೇಳಿದ ಮಾತು ನಿಜವಾಗುತ್ತದೆ. ಪವಿತ್ರವಾದ ನಾಲಿಗೆಯಿಂದ ಈ ಮಾತನ್ನ ನುಡಿದಿದ್ದಾರೆ. ಭಕ್ತಿಯಿಂದ ದೇವರ ಧ್ಯಾನ ಮಾಡುವ ಶ್ರೀಗಳು ಈ ಮಾತನ್ನ ಹೇಳಿದ್ದಾರೆ. ಆ ಭಗವಂತನೇ ಆ ಮಾತನ್ನು ಹೇಳಿಸಿರಬಹುದು. ಕಾರ್ಯಕರ್ತರು ಈಗಲೂ ಹೇಳುತ್ತಿದ್ದಾರೆ. ನಾನು ಅದನ್ನೇ ಹೇಳಿದ್ದೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧಳಾಗಿದ್ದೇನೆ.
ಶರಣರು ಭಕ್ತಿಯಿಂದ ಬಾಯಲ್ಲಿ ನುಡಿದಿರೋದು ಫಲ ಕೊಡುತ್ತದೆ. ಕೋಟಿ ಜನ ಹೇಳೋದು ಒಂದೇ, ಶ್ರೀಗಳು ಹೇಳೋದು ಒಂದೇ. ಭಗವಂತ ಎಲ್ಲರ ಮಾತನ್ನು ಕೇಳುವುದಕ್ಕೆ ಸಾಧ್ಯವಿಲ್ಲ. ಅವರಿಗೆ ಹತ್ತಿರವಿರುವವರ ಮಾತನ್ನು ಮಾತ್ರ ಕೇಳ್ತಾನೆ. ಹಾಗಾಗಿ ಅವರ ನಾಲಿಗೆಯಲ್ಲಿ ಈ ಮಾತು ಬಂದಿದೆ ಎಂದಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಒಬಿಸಿ ಸದಸ್ಯ ಸ್ಥಾನ ಸಿಕ್ಕಿರುವ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಮೇಲೆ ಬಹಳ ಪ್ರೀತಿ. ಅಲ್ಪಸಂಖ್ಯಾತ ಸಮುದಾಯ ಸೇರಿ ಸಣ್ಣ ಸಣ್ಣ ಸಮುದಾಯಕ್ಕೆ ಬಹಳಷ್ಟು ಸಹಾಯ ಮಾಡಿದ್ದಾರೆ. ಹಾಗಾಗಿ ಆ ಸ್ಥಾನಕ್ಕೆ ಅವರು ಸೂಕ್ತವಾದ ವ್ಯಕ್ತಿಯಾಗಿರುವ ಕಾರಣ ಎಐಸಿಸಿ ಆಯ್ಕೆ ಮಾಡಿದೆ ಎಂದಿದ್ದಾರೆ.

