ದೆಹಲಿಯಲ್ಲಿ ಡಿಕೆಗೆ ಸೋನಿಯಾ, ರಾಹುಲ್ ಕಡೆಯಿಂದ ಸಿಕ್ಕ ಅಭಯವೇನು..?

ಬೆಂಗಳೂರು: ಬಹಳ ದಿನಗಳ ಬಳಿಕ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ನಾಯಕರ ಭೇಟಿಗೆ ಸಾಧ್ಯವಾಗಿದೆ. ಕುರ್ಚಿ ಕದನ ನಡೆಯುತ್ತಲೇ ಇದ್ದ ಕಾರಣ, ಹೈಕಮಾಂಡ್ ಮಧ್ಯಪ್ರವೇಶಿಸಬೇಕಿತ್ತು. ಆದರೆ ಸಿದ್ದರಾಮಯ್ಯ ಅವರಿಗೆ ಸದಾ ಕಾಲಕ್ಕೂ ಸಿಗುವ ಹೈಕಮಾಂಡ್ ನಾಯಕರು, ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಸಿಗ್ತಾ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರಲ್ಲಿಯೇ ಒಂದಷ್ಟು ಚರ್ಚೆಗಳಾಗ್ತಾ ಇತ್ತು. ಕಡೆಗೂ ಇಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.

ಪಕ್ಷದ ಸಂಕಷ್ಟದ ದಿನಗಳಲ್ಲಿ ನೆರವಿಗೆ ನಿಂತಿದ್ದೆ. ಐಟಿ, ಇಡಿ, ಸಿಬಿಐ ದಾಳಿಯಿಂದಾಗಿ ತಿಹಾರ್ ಜೈಲಿಗೂ ಹೋಗಿ ಬಂದಿದ್ದೇನೆ. ಆ ಸಮಯದಲ್ಲಿ ತಿಹಾರ್ ಜೈಲಿಗೆ ನೀವೇ ಬಂದು ಭರವಸೆ ನೀಡಿದ್ದೀರಿ. ಕೊಟ್ಟ ಮಾತನ್ನ ನೀವೂ ಈಡೇರಿಸುವುದು ಯಾವಾಗ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆಯಿಂದ ಕಾಯ್ತಾನೆ ಇದ್ದಾರೆ.

ಇದೇ ವೇಳೆ ಸೋನಿಯಾ ಗಾಂಧಿ ಅವರು ಅಭಯವೊಂದನ್ನ ನೀಡಿದ್ದಾರೆ ಎನ್ನಲಾಗಿದೆ. ಸ್ವಲ್ಪ ಈಗ ನೀವೂ ತಾಳ್ಮೆಯಿಂದ ಇರಬೇಕು. ನಿಮಗೆ ಕೊಟ್ಟ ಭರವಸೆಯನ್ನ ನಾವೂ ಕಳೆಯೋದಿಲ್ಲ. ರಾಜ್ಯದ ಪರಿಸ್ಥಿತಿ ನೋಡಿಕೊಂಡು, ಸರಿಯಾ್ ಸಮಯಕ್ಕೆ ಸೂಕ್ತವಾದಂತ ನಿರ್ಧಾರವನ್ನ ಕೈಗೊಳ್ಳುತ್ತೇವೆ ಎಂದಿದ್ದಾರೆ. ರಾಹುಲ್ ಗಾಂಧಿ ಅವರು ಕೂಡ ಜೊತೆಗೆ ಇದ್ದ ಕಾರಣ ಅವರು, ಸಿದ್ದರಾಮಯ್ಯ ಹಾಗೂ ನಿಮ್ಮೊಂದಿಗೆ ಮಾತುಕತೆ ನಡೆಸುತ್ತೇವೆ. ಯಾವಾಗ ಮಾತುಕತೆ ಎನ್ನುವುದನ್ನು ಮುಂದೆ ತೀರ್ಮಾನಿಸುತ್ತೇವೆ.ಸಿಎಂ ಹಾಗೂ ನಿಮ್ಮನ್ನು ದೆಹಲಿಗೆ ಕರೆಸಿಕೊಳ್ಳುತ್ತೇವೆ. ಶೀಘ್ರದಲ್ಲೇ ಎಲ್ಲವೂ ನಿರ್ಧಾರ ಆಗಲಿದೆ ಎಂಬ ಮಾತನ್ನ ಹೇಳಿದ್ದಾರೆ. ಅಂತೂ ಇಂತೂ ತಮ್ಮ ಮನಸ್ಸಿನ ದುಗುಡವನ್ನ ಹೈಕಮಾಂಡ್ ಮುಂದೆ ಹೇಳಿ ಆಗಿದೆ. ಮುಂದಿನ ನಿರ್ಧಾರಕ್ಕೆ ಕಾಯ್ತಿದ್ದಾರೆ.

Share This Article
Enable Notifications OK No thanks