ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ರಣಕಣ ಜೋರಾಗಿದೆ. ಮೂರು ಪಕ್ಷಗಳು ಅಧಿಕಾರದ ಗದ್ದುಗೆಗೆ ಪ್ರಚರ ಕಾರ್ಯ ಆರಂಭಿಸಿದ್ದಾರೆ. ಈ ಬಾರಿಯ ಚುನಾವಣೆ ಬಾರೀ ಕುತೂಹಲ ಮೂಡಿಸಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಪ್ತಶ್ನೆ ಎಲ್ಲರನ್ನು ಕಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಲ್ಲಿ ಆಗಾಗ ಸಿಎಂ ಖುರ್ಚಿ ವಿಚಾರ ಚರ್ಚೆಯಾಗುತ್ತಲೆ ಇರುತ್ತದೆ.

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಹುದ್ದೆಯ ಚರ್ಚೆ ನಡೆಯುತ್ತಿದೆ. ಇಬ್ಬರ ಬೆಂಬಲಿಗರು ನಮ್ಮ ನಾಯಕ ಸಿಎಂ ಆಗಲಿ ಎಂದೇ ಬಯಸುತ್ತಾರೆ. ಜೊತೆಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಲ್ಲೂ ಸಿಎಂ ಆಗಬೇಕೆಂಬ ಹಂಬಲವೂ ಇದೆ. ಆ ಆಸೆ ಆಗಾಗ ವ್ಯಕ್ತವಾಗುತ್ತದೆ. ಆದರೆ ಇದೀಗ ಸಿದ್ದರಾಮಯ್ಯ ಅವರು, ಡಿಕೆಶಿ ಸಿಎಂ ಆದರೆ ತಪ್ಪೇನು ಎಂದಿದ್ದಾರೆ.

ಖಾಸಗಿ ಚಾನೆಲ್ ಸಂದರ್ಶನ ಒಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಡಿಕೆಶಿ ಸಿಎಂ ಆಗಲು ಬಯಸಿದ್ರೆ, ಆಕಾಂಕ್ಷಿಯಾಗಿದ್ರೆ ತಪ್ಪಲ್ಲ. ನಾನು ಸಿಎಂ ಹುದ್ದೆ ಆಕಾಂಕ್ಷಿಯಾಗಿದ್ದರೆ ಅದೂ ತಪ್ಪಲ್ಲ. ಅಂತಿಮವಾಗಿ ತೀರ್ಮಾನ ಮಾಡುವುದು ಶಾಸಕರು ಹಾಗೂ ಹೈಕಮಾಂಡ್ ನಾಯಕರು ಎಂದಿದ್ದಾರೆ.

