ಬೆಂಗಳೂರು: ಒಡಿಶಾದಲ್ಲಿ ರೈಲು ದುರಂತದಿಂದ ಈಗಾಗಲೇ 280 ಜನಕ್ಕೂ ಹೆಚ್ಚು ಸಾವಾಗಿದೆ. ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ರೈಲಿನಲ್ಲಿ ಕರ್ನಾಟಕದವರು ಕೂಡ ಪ್ರಯಾಣ ಮಾಡುತ್ತಾ ಇದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದಾರೆ. ಸಿಎಸ್ ವಂದಿತಾ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಎಷ್ಟು ಮಂದಿ ಪ್ರಯಾಣ ಮಾಡ್ತಾ ಇದ್ರು ಎಂಬೆಲ್ಲಾ ಡಿಟೈಲ್ ಪಡೆದುಕೊಂಡಿದ್ದಾರೆ. ಇನ್ನು ಬೆಂಗಳೂರು ವಿಭಾಗದ ರೈಲ್ವೆ ಪೊಲೀಸ್ DIGP ಶಶಿಜುಮಾರ್ ರೈಲು ದುರಂತದ ಬಗ್ಗೆ ಮಾತನಾಡಿ, ಬೆಂಗಳೂರಿನಿಂದ ಹೌರಾಗೆ ಟ್ರೈನ್ ಹೋಗ್ತಾ ಇತ್ತು. ಯಶವಂತಪುರದಿಂದ ಹೊರಟಿದ್ದ ರೈಲಿನ ಮೂರು ಬೋಗಿಗಳಿಗೆ ಹಾನಿಯಾಗಿದೆ.
ಹೌರಾಗೆ ಹೋಗುವುದಕ್ಕೆ 46 ಗಂಟೆ ಬೇಕಾಗಿದೆ. ದುರ್ಘಟನೆಯಲ್ಲಿ ಗಾಯಾಳಿ, ಸಾವು – ನೋವಿನ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ನಾಲ್ಕು ಹೆಲ್ಪ್ ಲೈನ್ಸ್ ಓಪನ್ ಮಾಡಿದ್ದೇವೆ. ಕಳಸದಿಂದ 100ಕ್ಕೂ ಹೆಚ್ಚು ಜನ ಈ ಟ್ರೈನ್ ನಲ್ಲಿ ಪ್ರಯಾಣ ಮಾಡಿದ್ದರು ಎಂದಿದ್ದಾರೆ.
ಸದ್ಯ ಕಳಸದ ಪ್ರಯಾಣಿಕರು ಎಲ್ಲರೂ ಬಚಾವ್ ಆಗಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಕರ್ನಾಟಕದಿಂದ ಇನ್ನು ಎಷ್ಟು ಜನ ಈ ಟ್ರೈನ್ ನಲ್ಲಿ ಇದ್ರು ಎಂಬ ಮಾಹಿತಿ ಸಿಗಬೇಕಿದೆ.