Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕರ್ನಾಟಕದಲ್ಲಿ ಬರದ ಭೀತಿಗೆ ಕಾರಣವೇನು ? ನಿವೃತ್ತ ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ ಅವರು ಹೇಳಿದ್ದೇನು ? 

Facebook
Twitter
Telegram
WhatsApp

 

ವಿಶೇಷ ವರದಿ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್, ಚಿತ್ರದುರ್ಗ, ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 9448338821

ಸುದ್ದಿಒನ್ : ಸ್ಪಾನಿಷ್ ಭಾಷೆಯಲ್ಲಿ ಎಲ್ ನೈನೊ ಎಂದರೆ ಬಾಲ ಯೇಸು ಎಂದರ್ಥ. ದಕ್ಷಿಣ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಕುತೂಹಲದ ನೈಸರ್ಗಿಕ ಘಟನೆಯೊಂದು ಕ್ರಿಸ್ಮಸ್ ಸಂದರ್ಭದಲ್ಲಿ ನಡೆಯುವುದರಿಂದ ಅದಕ್ಕೆ ಈ ಹೆಸರು ಬಂದಿದೆ. ದಕ್ಷಿಣ ಅಮೆರಿಕ ಪೆಸಿಫಿಕ್ ಸಾಗರದ ಪೂರ್ವದಲ್ಲಿ ಪ್ರತಿ ಐದರಿಂದ ಎಂಟು ವರ್ಷಗಳಿಗೊಮ್ಮೆ ಸಮುದ್ರ ನೀರಿನ ಗತಿ ಬದಲಾಗುತ್ತದೆ. ಪೆರು ಮತ್ತು ಈಕ್ವೆಡಾರ್‍ನ ಕರಾವಳಿ ಪ್ರದೇಶಗಳ ತಣ್ಣನೆಯ, ಸಿಹಿ ನೀರಿನ್ನು ಇದು ಹೆÇರತಳ್ಳುತ್ತದೆ. ಸಮುದ್ರ ಬೆಚ್ಚಗಿನ ನೀರು ಆ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತದೆ.

ಬೆಚ್ಚಗಿನ ಸಮುದ್ರ ನೀರಿನ ಪ್ರವಾಹ, ಮೀನುಗಾರಿಕೆ ಪ್ರದೇಶಗಳಲ್ಲಿರುವ ಟ್ಯೂನ ಮತ್ತು ಅಂಕೋನಿ ಮೊದಲಾದ ಅನೇಕ ರೀತಿಯ ಮೀನುಗಳ ಸಾವಿಗೆ ಕಾರಣವಾಗುತ್ತದೆ. ಮೀನುಗಳ ಮುಖ್ಯ ಆಹಾರವಾಗಿರುವ ಪ್ಲಾಂಕ್ಟೋನ್‍ಗಳು ತಣ್ಣಗಿನ ಪ್ರದೇಶಗಳಿಗೆ ಹೋಗುವುದರಿಂದ ಮೀನುಗಳು, ಅಪರೂಪದ ಸಸ್ಯಗಳೂ ಸಾಯುತ್ತವೆ.

ಜಾಗತಿಕ ವಾತಾವರಣದ ಮಟ್ಟದಲ್ಲಿ ಎಲ್ ನೈನೋಗೆ ಮಹತ್ತ್ವದ ಸ್ಥಾನವಿದೆ. ಇದು ವಾತಾವರಣದ ಒತ್ತಡದ ಎರಡು ಕೇಂದ್ರಗಳಿಗೆ ಸಂಬಂಧಿಸಿದೆ. ದಕ್ಷಿಣ ಪೆಸಿಫಿಕ್‍ನ ಪೂರ್ವದಲ್ಲಿರುವ ಈಸ್ಟರ್ ಐಲ್ಯಾಂಡ್ ಹಾಗೂ ಪಶ್ಚಿಮದಲ್ಲಿ ಉತ್ತರ ಆಸ್ಟ್ರೇಲಿಯದಲ್ಲಿ ಈ ಕೇಂದ್ರಗಳಿವೆ.

ಸಮುದ್ರ ಅಲೆಗಳ ಬದಲಾವಣೆ ಆ ಪ್ರದೇಶದ ಇಡೀ ವಾತಾವರಣವನ್ನು ಕದಡುತ್ತದೆ. ಅತಿ ಹೆಚ್ಚು ವಾತಾವರಣ ಒತ್ತಡದಿಂದಾಗಿ ಪೂರ್ವದಲ್ಲಿ ಬಿಸಿ ಹಾಗೂ ಒಣ ಹವೆ ಇದ್ದರೆ, ಪಶ್ಚಿಮದಲ್ಲಿ ಮರಗಟ್ಟಿಸುವ ಹಿಮಗಾಳಿ ಇರುತ್ತದೆ. ಪೂರ್ವಾಭಿಮುಖವಾಗಿ ಬೀಸುವ ಗಾಳಿ, ದಕ್ಷಿಣ ಅಮೆರಿಕ ಕರಾವಳಿಯ ನೀರನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ. ನಿಧಾನವಾಗಿ ಗಾಳಿ ಕಡಿಮೆಯಾಗುತ್ತಿದ್ದಂತೆ ಬಿಸಿ ಗಾಳಿ ಎಲ್-ನೈನೋ-ಪೆರುವಿಗೆ ವಾಪಸ್ಸಾಗುತ್ತದೆ.

ವಿಶ್ವದಾದ್ಯಂತ ಎಲ್ ನೈನೊ ವ್ಯಾಪಕ ದುರಂತಕ್ಕೆ ಕಾರಣವಾಗುತ್ತಿದೆ. ಇದರಿಂದ ಆಫ್ರಿಕ ಹಾಗೂ ಇಂಡೋನೇಷಿಯದಲ್ಲಿ ಭೀಕರ ಕ್ಷಾಮ ಕಂಡುಬಂದು ಸಾವಿರಾರು ಮಂದಿ ಸಾಯುತ್ತಾರೆ. ಗಾಲಾಪಗೋಸ್ ದ್ವೀಪದಲ್ಲಿ ಬೆಂಕಿ ಕಾಣಿಸಿಕೊಳ್ಳುವುದೂ ಇದೆ. ಆಸ್ಟ್ರೇಲಿಯದಲ್ಲೂ ಕ್ಷಾಮ ಕಂಡು ಬರುತ್ತದೆ. ಕ್ಯಾಲಿಫೋರ್ನಿಯ ಹಾಗೂ ದಕ್ಷಿಣ ಅಮೆರಿಕದಲ್ಲಿ ಚಂಡಮಾರುತದಿಂದಾಗಿ ಮನೆ, ಕಟ್ಟಡ, ಸೇತುವೆಗಳು ಕುಸಿಯುತ್ತವೆ. ದವಸ ಧಾನ್ಯಗಳು ನಾಶವಾಗುತ್ತವೆ. ಸಮುದ್ರ ಬಿಸಿಯಾಗುವುದರಿಂದ ಪೆರುವಿನಲ್ಲೂ ಕೃಷಿ ಹಾಗೂ ಕಾಡುಪ್ರಾಣಿಗಳು ನಾಶವಾಗುತ್ತವೆ. ಇದರಿಂದಾಗಿ 1991ರಲ್ಲಿ ಜಪಾನಿನಲ್ಲಿ ತೂಫಾನುಗಳು ಉಂಟಾಗಿದ್ದವು. ರಾಕಿ ಪರ್ವತಗಳಲ್ಲೂ ದಾಖಲೆಯ ಹಿಮಮಳೆಯಾಗಿತ್ತು.

ಎಲ್ ನೈನೊ ಸುಮಾರು 18 ತಿಂಗಳವರೆಗೂ ಮುಂದುವರಿಯುತ್ತದೆ. ಕೆಲವು ಬಾರಿ ನಿರೀಕ್ಷೆಗೂ ಮೀರಿ ಭೂಮಿಯಲ್ಲಿ ನೈಸರ್ಗಿಕ ದುರಂತಗಳಿಗೆ ಕಾರಣವಾಗುತ್ತದೆ. ಉದಾಹರಣೆ 1991ರಲ್ಲಿ ಉಂಟಾದ ಎಲ್ ನೈನೊದ ಪರಿಣಾಮ 1993ರವರೆಗೆ ಮುಂದುವರಿದಿತ್ತು. ವಿಜ್ಞಾನಿಗಳು ಮೊದಲು ಎಲ್ ನೈನೊ ಒಂದು ಸಾಮಾನ್ಯವಾದ ಘಟನೆ, ಮುನ್ನೆಚ್ಚರಿಕೆ ವಹಿಸಿದರೆ ಅದು ಯಾವಾಗ ಉಂಟಾಗಬಹುದು ಎನ್ನುವುದನ್ನು ಪತ್ತೆ ಹಚ್ಚಬಹುದು ಎಂದು ಭಾವಿಸಿದ್ದರು.

ಆದರೆ ಈಗ ಅದು ಸುಳ್ಳಾಗಿದೆ. ಇದರ ಮೂಲ ಕಾರಣ ಇನ್ನೂ ಪತ್ತೆಯಾಗಿಲ್ಲ. ಅದಕ್ಕಾಗಿ ಸಂಶೋಧನೆಗಳು ಮುಂದುವರಿಯುತ್ತಲೇ ಇದೆ.

ನಮ್ಮ ಕರ್ನಾಟಕದಲ್ಲಿ ಇತ್ತಿಚಿನ ದಿನಗಳಲ್ಲಿ ಮುಂಗಾರು ಮಳೆಯಿಲ್ಲದೆ ಬರಗಾಲವಾಗಿದೆ. ಇದಕ್ಕೆ ಕಾರಣ ಮಧ್ಯ ಫೆಸಿಪಿಕ್ಸ್ ಸಾಗರದಿಂದ ಹಿಂದೂಮಹಾಸಾಗರದ ಮಧ್ಯದಲ್ಲಿ ವಾತಾವರಣದ ಉಷ್ಣತೆ ಮತ್ತು ಒತ್ತಡ
ಏರು-ಪೇರು ಆಗುವುದರಿಂದ ಮಧ್ಯ ಫೆಸಿಪಿಕ್ಸ್ ಸಾಗರದಲ್ಲಿ ವಾತಾವರಣದಲ್ಲಿನ ಒತ್ತಡ ಮತ್ತು ಉಷ್ಣತೆ ಹೆಚ್ಚಾಗಿದ್ದು, ಹಿಂದೂಮಹಾಸಾಗರದಲ್ಲಿ ವಾತಾವರಣದಲ್ಲಿ ಉಷ್ಣತೆ ಮತ್ತು ಒತ್ತಡ ಕಡಿಮೆಯಾಗಿರುವುದರಿಂದ ಹಿಂದೂಮಹಾಸಾಗರದಲ್ಲಿ ಉದ್ಭವಿಸುವ ಮೋಡಗಳು ಕಡಿಮೆ ಪ್ರಮಾಣದಲ್ಲಿ ಮತ್ತು ನೀರಾಂಶ ಕಡಿಮೆ ಇರುವ ಮೋಡಗಳಿಂದ ಕೂಡಿ ಉತ್ತರ ಭಾಗವಾದ ಭಾರತದ ಕಡೆಗೆ ಚಲಿಸುವ ಮೋಡಗಳ ವೇಗ ಅತಿಕಡಿಮೆ ಮತ್ತು ನೀರಿನ ಅಂಶ ಕಡಿಮೆ ಹೊಂದಿರುವ ಮೋಡಗಳು ಬೀಸುವುದರಿಂದ ಕರ್ನಾಟಕದಲ್ಲಿ ಸರಾಸರಿ ಮಳೆಗಿಂತ ಬಹಳ ಕಡಿಮೆ ಬಿದ್ದಿರುತ್ತದೆ. ಇಂತಹ ಪರಿಸ್ಥಿತಿ ಕಳೆದ 28 ವರ್ಷಗಳ ಹಿಂದೆ ಮಳೆಯಿಲ್ಲದೆ ಬರಗಾಲಕ್ಕೆ ತುತ್ತಗಾಗಿತ್ತೆಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಇದಕ್ಕೆ ಕಾರಣ ಎಲ್ ನೈನೊ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!