ಬೆಂಗಳೂರು: ನಾಳೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಆದ್ರೆ ಈಗಾಗಲೇ ಸಿಕ್ಕಿರುವ ಸಮೀಕ್ಷೆಗಳ ಪ್ರಕಾರ ಅತಂತ್ರ ಫಲಿತಾಂಶ ಬರಲಿದೆ ಎಂಬುದು. ಇದನ್ನು ಕೇಳಿದಾಗಿನಿಂದ ರಾಜಕೀಯ ಪಕ್ಷಗಳು ಗಾಬರಿಯಾಗಿವೆ. ಈ ಬಾರಿ ನಾವೇ ಸರ್ಕಾರ ರಚನೆ ಮಾಡಬೇಕು ಎಂದುಕೊಂಡಿರೋ ಪಕ್ಷಗಳು ಹೊಸ ಹೊಸ ಫ್ಲ್ಯಾನ್ ಮಾಡುತ್ತಿವೆ.
ಇದೀಗ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಇಂದು ಸಭೆ ಕರೆದು ಮಾತನಾಡಿದ್ದಾರೆ. ಯಡಿಯೂರಪ್ಪ ಅವರ ನಿವಾಸ ಕಾವೇರಿಯಲ್ಲಿ ಸಭೆ ಸೇರಿದ್ದು, ಸಿಎಂ ಬೊಮ್ಮಾಯಿ, ಲೇಹರ್ ಸಿಂಗ್, ಎ ಟಿ ರಾಮಸ್ವಾಮಿ, ಮುರುಗೇಶ್ ನಿರಾಣಿ, ಭೈರತಿ ಬಸವರಾಜ್ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.
ಈಗ ಕಾಂಗ್ರೆಸ್ ಕೂಡ ಸರ್ಕಾರ ರಚನೆ ಮಾಡಲು ಕಾಯುತ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ಕಾಂಗ್ರೆಸ್ ಚಲನವಲನದ ಮೇಲೆ ಕಣ್ಣಿಡುವುದಕ್ಕೆ ಸೂಚನೆ ನೀಡಿದ್ದಾರೆ. ಪಕ್ಷೇತರರು ಯಾರೆಲ್ಲಾ ಗೆಲ್ಲುತ್ತಾರೆ ಅವರ ಮೇಲೆ ಕಣ್ಣಿಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿ. ಕುಮಾರಸ್ವಾಮಿ ಅವರ ಮೈತ್ರಿ ಷರತ್ತಿನ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷ ಬಿಟ್ಟು ಹೋದವರ ಮೇಲೆ ಗಮನ ಹರಿಸಿ ಎಂದಿದ್ದಾರೆ.