Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಶಬರಿಮಲೆ‌ ಚಿನ್ನಕ್ಕೂ ಬಳ್ಳಾರಿ ವ್ಯಾಪಾರಕ್ಕೂ ಏನಿದು ಲಿಂಕ್..?

---Advertisement---

ಬಳ್ಳಾರಿ: ಶಬರಿಮಲೆಯಲ್ಲಿ ಕಳ್ಳತನವಾಗಿದ್ದ ಚಿನ್ನದ ವಿಚಾರಕ್ಕೆ‌ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಎಸ್ಐಟಿ ಇದರ ತನಿಖೆ ನಡೆಸುತ್ತಿದ್ದು, ಇದೀಗ ಬಳ್ಳಾರಿಯಲ್ಲಿ ನೆಲೆಸಿರುವ ಆಭರಣ ವ್ಯಾಪಾರಿ ಗೋವರ್ಧನ್ ಹಾಗೂ ಸ್ಮಾರ್ಟ್ ಕ್ರಿಯೇಷನ್ಸ್ ಸಿಇಓ ಪಂಕಜ್ ಭಂಡಾರಿ ಅವರನ್ನು ಬಂಧಿಸಲಾಗಿದೆ. ಪಂಕಜ್ ಭಂಡಾರು ದ್ಚಾರಪಾಲಕ ಮೂರ್ತಿಗಳನ್ನು ಕೆಲಸಕ್ಕಾಗಿ ತೆಗೆದುಕೊಂಡು ಹೋದ ನಂತರ ಅವುಗಳ ತೂಕ ಕಡಿಮೆ ಆಗಿದೆ ಎಂದು ಎಸ್ಐಟಿ ಅಧಿಕಾರಿಗಳು ಆರೋಪಿಸಿದ್ದಾರೆ.

 

ಪಂಕಜ್ ಭಂಡಾರಿಯೇ ಮೂರ್ತಿಯಿಂದ ಚಿನ್ನ ತೆಗೆದು, ಗೋವರ್ಧನ್ ಗೆ ಮಾರಾಟ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ. ಅಕ್ಟೋಬರ್ 28ರಂದು ಆರಂಭಿಕ ತನಿಖೆಯ ಭಾಗವಾಗಿ ಎಸ್ಐಟಿ ಗೋವರ್ಧನ್ ಅವರ ಆಭರಣ ಅಂಗಡಿಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಈ ಹಗರಣದಲ್ಲಿ ತನ್ನ ಪಾತ್ರವಿಲ್ಲ. ಚಿನ್ನದ ಹೊದಿಕೆಯ ಬಾಗಿಲಿಗೆ ದೇಣಿಗೆಯಾಗಿ ಹಣ ನೀಡಿದ್ದೇನೆ ಎಂದು ಹೇಳಿಕೊಂಡಿದೆ. ಪ್ರಜರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರು 2019ರಲ್ಲಿ ದೇವಾಲಯಕ್ಕೆ ಚಿನ್ನ ಲೇಪಿತ ಬಾಗಿಲನ್ನು ಸಮರ್ಪಣೆ ಮಾಡುವ ಉದ್ದೇಶದಿಂದ ನನ್ನನ್ನು ಸಂಪರ್ಕಿಸಿದ್ದರು. ಬಳ್ಳಾರಿಯಲ್ಲು ನಿರ್ಮಿಸಲಾದ ಹೊಸ ಬಾಗಿಲನ್ನು ಶಬರಿಮಲೆ ದೇವಸ್ಥಾನಕ್ಕೆ ಸಾಗಿಸುವ ಮೊದಲು ಮೊದಲು ಅವರ ಆಭರಣ ಅಂಗಡಿಯಲ್ಲಿ ಪ್ರದರ್ಶಿಸಲಾಗಿತ್ತು ಗೋವರ್ಧನ್‌ ತಿಳಿಸಿದ್ದರು.

ಡಿ.17 ರಂದು ತನಿಖಾ ತಂಡವು ಶಬರಿಮಲೆಯ ಮಾಜಿ ಆಡಳಿತ ಅಧಿಕಾರಿ ಶ್ರೀಕುಮಾರ್ ಅವರನ್ನು ಬಂಧಿಸಿತ್ತು. 2019 ರಲ್ಲಿ ದ್ವಾರಪಾಲಕ ವಿಗ್ರಹಗಳ ಚಿನ್ನದ ಫಲಕಗಳನ್ನು ತೆಗೆದು ಚೆನ್ನೈಗೆ ಸಾಗಿಸಿದಾಗ ಅವರು ಆಡಳಿತ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ನವೆಂಬರ್‌ನಲ್ಲಿ ಚಿನ್ನದ ಕಳ್ಳತನದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಎಸ್‌ಐಟಿ ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಮತ್ತು ಸಿಪಿಎಂ ನಾಯಕ ಎ ಪದ್ಮಕುಮಾರ್ ಅವರನ್ನು ಬಂಧನ ಮಾಡಿತ್ತು.

Join WhatsApp

Join Now

Join Telegram

Join Now