ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತವಾಗಲೂ ಕಾರಣವೇನು..? ಪರಿಹಾರವೇನು..?

suddionenews
1 Min Read

 

ಇತ್ತಿಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಅನ್ನೋದು ಕಾಮನ್ ಆಗಿ ಹೋಗಿದೆ. ಅದರಲ್ಲೂ ಕೊರೊನಾ ನಂತರದ ದಿನಗಳಲ್ಲಿ ಚಿಕ್ಕವಯಸ್ಸಿನವರಿಗೂ ಹಾರ್ಟ್ ಅಟ್ಯಾಕ್ ಜಾಸ್ತಿಯಾಗಿ ಕಾಣಿಸುತ್ತಿದೆ. ಆದ್ರೆ ಅದಕ್ಕೆಲ್ಲಾ ಕಾರಣ ನಮ್ಮ ಈಗಿನ ಲೈಫ್ ಸ್ಟೈಲ್. ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೂ ಆರೋಗ್ಯದಿಂದ ಇರಬಹುದು. ಆದರೆ ಅದಕ್ಕೊಂದಿಷ್ಟು ಗಮನ, ಒಂದಿಷ್ಟು ಆರೋಗ್ಯ ಕಾಳಜಿ ಮಾಡಬೇಕಾಗುತ್ತದೆ.

ಹೃದಯಾಘಾತಕ್ಕೆ‌ಕಾರಣಗಳು ಏನು ಅನ್ನೋದರ ಮಾಹಿತಿ ಇಲ್ಲಿದೆ. ನಾವೆಲ್ಲಾ ಇತ್ತಿಚೆಗೆ ಮಾಡರ್ನ್ ಲೈಫ್ ಸ್ಟೈಲ್ ಲೀಡ್ ಮಾಡುತ್ತಿದ್ದೇವೆ. ಒಂದೇ ಕಡೆ ಕೂತು ಕೆಲಸ ಮಾಡುತ್ತೇವೆ. ಇದು ಹಾರ್ಟ್ ಅಟ್ಯಾಕ್ ಆಗುವುದಕ್ಕೂ ಕಾರಣವಾಗುತ್ತದೆ. ಒಂದಷ್ಟು ಓಡಾಟ, ಒಂದಷ್ಟು ವ್ಯಾಯಾಮದ ಅಗತ್ಯವಿದೆ.

ಇತ್ತಿಚೆಗೆ ಯುವಜನತೆ ಮಲಗುವುದೇ ಮಧ್ಯರಾತ್ರಿ ಕಳೆದ ಮೇಲೆ. ಕಡಿಮೆ ನಿದ್ದೆಯೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನಿದಗದೆ ಕಡಿಮೆ ಮಾಡಿದಾಗ ಅತಿಯಾದ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

ಇನ್ನು ತೂಕ ಹೆಚ್ಚಾಗಿ ಹೊಂದಿರುವವರು ಇದ್ದಕ್ಕಿದ್ದ ಹಾಗೇ ತೂಕ ಇಳಿಸುವುದು ಅಪಾಯಕಾರಿಯಾಗಿರುತ್ತದೆ. ಅದರ ಬದಲು ಆಹಾರ ಕ್ರಮ ಪಾಲನೆ ಮಾಡುವ ಮೂಲಕ ತೂಕ ಇಳಿಸಿಕೊಳ್ಳಿ ಇದ್ದಕ್ಕಿದ್ದ ಹಾಗೇ ಹೆಚ್ವು ತೂಕ ಇಳಿಸುವುದರಿಂದಾನೂ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇದೆ.

ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ಹಣ್ಣು ತರಕಾರಿ ಹೆಚ್ಚಾಗಿ ಬಳಸಿ, ಸಂಸ್ಕರಿಸಿದ ಆಹಾರ ಕಡಿಮೆ ಮಾಡಿ. ಕೊಬ್ಬಿನಾಂಶ ಇರುವ ಆಹಾರ ಸೇವಿಸಿ. ಉಪ್ಪನ್ನು ಮಿತಿಯಾಗಿ ಬಳಕೆ ಮಾಡಿ, ನೀರನ್ನು ಹೆಚ್ಚಾಗಿ ಕುಡಿಯಿರಿ.

Share This Article
Leave a Comment

Leave a Reply

Your email address will not be published. Required fields are marked *