ಉತ್ತರ ಕರ್ನಾಟಕಕ್ಕೆ ಸಿದ್ದರಾಮಯ್ಯ ಕೊಡುಗೆ ಏನು..? ರಾಯರೆಡ್ಡಿ ಹೇಳಿದ್ದೇನು..?

1 Min Read

ಬೆಳಗಾವಿ: ಇಂದಿನ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ರಾಯರೆಡ್ಡಿ ಅವರು ಮಾತನಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಇದೇ ರೀತಿಯಾದ ಬೆಂಬಲ ಸಿಕ್ಕಿದರೆ ದಕ್ಷಿಣ ಕನ್ನಡದಂತೆ ಫಲಿತಾಂಶ ಸಿಗಲಿದೆ. ಇದಕ್ಕೆ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಮರಿಸುತ್ತೇನೆ ಎಂದು ಸಾಧನೆಗಳನ್ನು ವಿವರಿಸಿದ್ದಾರೆ.

488 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದೀರಿ. ನಮ್ಮ ವಿರೋಧ ಪಕ್ಷದ ಸ್ನೇಹಿತರಿಗೆ ಈ ಬಗ್ಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಕಳೆದ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಎರಡು ವರ್ಷಗಳ ಕಾಲ ಉನ್ನತ ಶಿಕ್ಷಣ ಮಂತ್ರಿಯಾಗಿ‌ ಕೆಲಸ‌ ಮಾಡುವ ಅವಕಾಶ ಸಿಕ್ಕಿತ್ತು. ಆಗ ಕರ್ನಾಟಕದಲ್ಲಿ ಐಐಟಿ ಪ್ರಾರಂಭ ಆಗಬೇಕು ಅಂತ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿತು. ಇದಕ್ಕೆ ನಾನು ನಮ್ಮ ಮುಖ್ಯಮಂತ್ರಿಯನ್ನ ಅಭಿನಂದಿಸುತ್ತೇನೆ. ಕೇಂದ್ರ ಸರ್ಕಾರವೇ ನೀಡಿದರು, ಅದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದಿದೆ.

ಐಐಟಿಯನ್ನ ಮೈಸೂರಲ್ಲಿ ಮಾಡಬೇಕು ಎಂಬ ಒತ್ತಾಯ ಜಾಸ್ತಿ ಇತ್ತು. ಆದರೆ ಅದನ್ನ ಧಾರವಾಡದಲ್ಲಿಯೇ ಮಾಡುತ್ತೇವೆ, ಉತ್ತರ ಕರ್ನಾಟಕಕ್ಕೆ ಕೊಡುತ್ತೇವೆ ಅಂತ ಹೇಳಿ ಮಾಡಿಸಿದರು. 2000ಕ್ಕೂ ಹೆಚ್ಚು ಭೂಮಿಯನ್ನ ಕೇಂದ್ರಕ್ಕೆ ಉಚಿತವಾಗಿ ನೀಡಿದ ಪರಿಣಾಮವಾಗಿ ಇವತ್ತು ಉತ್ತರ ಕರ್ನಾಟಕದಲ್ಲಿ ಐಐಟಿ ಆಗುವುದಕ್ಕೆ ಸಾಧ್ಯವಾಯಿತು. ಐಐಟಿ ಕರ್ನಾಟಕಕ್ಕೆ ಯಾವುದೇ ರೀತಿಯ ಉಪಯೋಗವಿಲ್ಲ. ಯಾಕೆ ಗೊತ್ತಾ..? ಆಲ್ ಇಂಡಿಯಾ ಸೆಲೆಕ್ಷನ್ ಅದು. ಭೂಮಿ ನಮ್ಮದು ಕಟ್ಟಡ ಕೇಂದ್ರದ್ದು, ಸೆಲೆಕ್ಷನ್ ಆಫ್ ದಿ ಸ್ಟುಡೆಂಟ್ ಆಲ್ ಓವರ್ ಇಂಡಿಯಾ. ಕರ್ನಾಟಕದವರು 10-20 ಜನ ಅಷ್ಟೇ ಸೆಲೆಕ್ಟ್ ಆಗಿರಬಹುದು ಎಂಬ ಮಾತನ್ನ ಹೇಳಿದ್ದಾರೆ.

Share This Article
Enable Notifications OK No thanks