ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತಿಚೆಗೆ ಜನರ ನಡುವೆ ಬೆರೆಯುವುದನ್ನು ಕಲಿತಿದ್ದಾರೆ. ಪಕ್ಷ ಸಂಘಟನೆ ಮಾಡಲು ಭಾರತ್ ಜೋಡೋ ಯಾತ್ರೆಯ ಮೂಲಕ ಇಡೀ ದೇಶವನ್ನು ಸುತ್ತಿ ಬಂದವರು ಅವರು. ಹಾಗೇ ಸಾಮಾನ್ಯ ಜನರ ನಡುವೆ ಇದ್ದು, ಅವರ ಸಮಸ್ಯೆಗಳನ್ನು ಆಲಿಸಿದವರು. ಇದೀಗ ಗ್ಯಾರೇಜ್ ನಲ್ಲಿ ಕುಳಿತೇ ಜನರ ಸಮಸ್ಯೆಯನ್ನು ಆಲಿಸುತ್ತಿದ್ದಾರೆ.
ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೆಹಲಿಯ ಕರೋಲ್ ಬಾಗ್ ನಲ್ಲಿರುವ ಮೆಕಾನಿಕಲ್ ಅಂಗಡಿಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಕಾಂಗ್ರೆಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.
ರಾಹುಲ್ ಗಾಂಧಿ, ಗ್ಯಾರೇಜ್ ಒಳಗೆ ಕೂತು, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವೆ ಜೊತೆಗೆ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಸ್ಕೂಡ್ರೈವರ್ ತೆಗೆದುಕೊಂಡು ಏನನ್ನೋ ರಿಪೇರಿ ಮಾಡುತ್ತಿದ್ದಾರೆ. ಅಂಗಡಿಯಲ್ಲಿ ತುಂಬಾ ಸಿಂಪಲ್ ಆಗಿ ಕೂತಿದ್ದು, ಕೆಲಸಗಾರರ ಸಂಕಷ್ಟವನ್ನು ಕೇಳುತ್ತಿದ್ದಾರೆ. ಮಾರ್ಕೇಟ್ ನಲ್ಲೂ ರಾಹುಲ್ ಗಾಂಧಿ ಓಡಾಟ ನಡೆಸಿದ್ದು, ಜನರೆಲ್ಲಾ ರಾಹುಲ್ ಗಾಂಧಿ ಅವರನ್ನು ಮಾತನಾಡಿಸಲು ಸುತ್ತುವರೆದಿದ್ದರು. ರಾಹುಲ್ ಗಾಂಧಿ ಕೂಡ ಬಂದವರಿಗೆಲ್ಲಾ ಶೇಕ್ ಹ್ಯಾಂಡ್ ಮಾಡಿ, ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ.