ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ ಸ್ಪರ್ಧೆಯಾಗಿ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ ಅವರಿದ್ದಾರೆ. ಇಂದಿನಿಂದ ಪ್ರಚಾರ ಕಾರ್ಯದಲ್ಲಿ ನೇಹಾ ತಂದೆ ನಿರಂಜನ ಹೀರೇಮಠ ಭಾಗಿಯಾಗಿದ್ದಾರೆ.
ಇತ್ತಿಚೆಗಷ್ಟೇ ನೇಹಾ ಹೀರೇಮಠ ಕೊಲೆಯ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಫಯಾಜ್ ಎಂಬಾತ ನೇಹಾರನ್ನು ಕ್ರೂರವಾಗಿ ಕೊಂದಿದ್ದ. ಈ ಕೊಲೆಯನ್ನು ಖಂಡಿಸಿ, ಪ್ರತಿಭಟನೆಗಳು ನಡೆದವು, ಆರೋಪಿಯ ಗಲ್ಲು ಶಿಕ್ಷೆಗೆ ಒತ್ತಾಯಗಳು ಕೇಳಿ ಬಂದವು. ಇದೀಗ ಮಗಳ ಸಾವಿನ ಬಳಿಕ ನೇಹಾ ತಂದೆ ನಿರಂಜನ ಹಿರೇಮಠ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೇಹಾ ಹತ್ಯೆ ವಿಚಾರವೇ ಬೇರೆ, ಚುನಾವಣೆಯೇ ಬೇರೆ. ತಾನೊಬ್ಬ ಮೂಲ ಕಾಂಗ್ರೆಸ್ಸಿಗ. ಪಕ್ಷ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಕೆಲ ಜವಬ್ದಾರಿ ತನ್ನ ಮೇಲಿರುತ್ತದೆ. ಪಕ್ಷದ ಕಾರ್ಯಕರ್ತನಾಗಿ ಅವುಗಳನ್ನು ನಿಭಾಯಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ನೇಹಾ ಹತ್ಯೆ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬಂದಿದ್ದು ಕೇಂಧರ ಸಚಿವ ಪ್ರಹ್ಲಾದ್ ಜೋಶಿ ಅವರು. ಆದರೆ ಈಗ ಅವರ ವಿರುದ್ಧವೇ ಪ್ರಚಾರ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ಜೋಶಿ ಅವರ ಉಪಕಾರ ಬಹಳ ದೊಡ್ಡದು. ಅವರೇ ನಮ್ಮ ನೆರವಿಗೆ ನಿಲ್ಲಬೇಕು ಅಂತಾನು ಹೇಳಿದ್ದು ಇದೆ. ನಮ್ಮ ಪಕ್ಷದ ಮುಖಂಡರು ಸಹ ನನ್ನನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಬೇರೆ ಬೇರೆ ಪಕ್ಷಗಳ ನಾಯಕರು ಸಹ ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಆದರೆ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನ್ನ ಜವಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.