ಚಿಕ್ಕಬಳ್ಳಾಪುರ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸಂಕಟಪಡುತ್ತಿದ್ದಾರೆ. ಅತ್ತ ಅಲ್ಲಿ ಉಳಿದುಕೊಳ್ಳಲು ಆಗದೆ, ಇತ್ತ ತಮ್ಮ ದೇಶಕ್ಕೂ ವಾಪಾಸ್ಸು ಆಗಲು ಆಗದೆ ಭಯದಲ್ಲೇ ಇದ್ದಾರೆ.
ಈ ಸಂಬಂಧ ಇದೀಗ ಸಚಿವ ಸುಧಾಕರ್ ಮಾತನಾಡಿದ್ದು, ಉಕ್ರೇನ್ ನಲ್ಲಿರೋ ವಿದ್ಯಾರ್ಥಿಗಳ ಸಹಾಯಕ್ಕೆ ನಾವೂ ಈಗಾಗಲೇ ವಿದೇಶಾಂಗ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕನ್ನಡಿಗರ ರಕ್ಷಣೆಗೆ ನಾವೂ ಸದಾ ಬದ್ಧರಾಗಿದ್ದೆವೆ. ಆದ್ರೆ ವಿದ್ಯಾರ್ಥಿಗಳು ನೀವಾಗಿ ನೀವೆ ನಿರ್ಧಾರ ತೆಗೆದುಕೊಂಡು ಬಾರ್ಡರ್ ಏರಿಯಾಗಳಿಗೆ ಹೋಗುವ ಪ್ರಯತ್ನ ಮಾಡಬೇಡಿ.
ನಮ್ಮ ಭಾರತ ಸರ್ಕಾರ ವಿವಿಧ ಹಂತಗಳಲ್ಲಿ ಇತರೆ ದೇಶಗಳ ಜೊತೆ ಮಾತುಕತೆ ನಡೆಸುತ್ತಿದೆ. ನೀವೀಗ ಎಲ್ಲಿದ್ದಿರೋ ಅಲ್ಲಿಯೇ ಇರಿ. ಕೆಲವೇ ದಿನಗಳಲ್ಲಿ ಕದನ ವಿರಾಮ ಆಗುವ ಅಪೇಕ್ಷೆ ನಮ್ಮದು.ಕದನ ವಿರಾಮದ ನಂತರೆ ಭಾರತಕ್ಕೆ ಬರುವವರನ್ನು ಕರೆತರಲು ಸರ್ಕಾರ ಬದ್ಧವಾಗಿದೆ. ಅಲ್ಲೇ ಉಳಿಯುವವರಿಗೆ ರಕ್ಷಣೆ ಕೊಡುವ ಕೆಲಸ ಸಹ ಮಾಡಲಿದ್ದೇವೆ ಎಂದಿದ್ದಾರೆ.