ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಲಕ್ಷ್ಮಣ್ ಸವದಿ ಏನಂದ್ರು..?

 

ಚಿಕ್ಕೋಡಿ: ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಬೇಸರಕ್ಕೆ ಕಾಂಗ್ರೆಸ್ ಗೆ ಬಂದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೈತಪ್ಪಿದೆ. ಕ್ಷೇತ್ರದಲ್ಲಿ ಗೆಲುವು ಕಂಡರೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲಾಗಿಲ್ಲ. ಈ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.ಬೇಸರವನ್ನು ಹೊರ ಹಾಕಿದ್ದಾರೆ.

ಚಿಕ್ಕೋಡಿಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಭಿಮಾನಿಗಳಿಗೆ ಬೇಸರವಿದೆ. ಇದು ಸಹಜವಾಗಿಯೇ ಇರುತ್ತದೆ. ಸಿದ್ದರಾಮಯ್ಯ ಸಂಪುಟದಲ್ಲಿ ಮುಖ್ಯಮಂತ್ರಿಗಳು ಸೇರಿ 34 ಮಂದಿ‌ ಇದ್ದಾರೆ. ಕಾಂಗ್ರೆಸ್ ನಲ್ಲಿ ಹಳಬರನ್ನು ಆಯ್ಕೆ‌ಮಾಡಿದ್ದಾರೆ. ಅವರಿಗೆ ಪ್ರಾಧಾನ್ಯತೆ ನೀಡಬೇಕು ಅಲ್ವಾ.

ನಾವೂ ಈಗಷ್ಟೇ ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ಮನುಷ್ಯನಿಗೆ ದೂರದೃಷ್ಟಿ ಇರಬೇಕು ಅಲ್ವಾ. ತಾಳ್ಮೆಯೂ ಬಹಳ ಮುಖ್ಯ‌. ಇವು ಎರಡು ಇದ್ದರೆ ರಾಜಕಾರಣದಲ್ಲಿ ನಡೆಯುತ್ತದೆ. ರಾಜಕಾರಣದಲ್ಲಿ ಸಚುವರಾಗಬೇಕು, ಸಿಎಂ, ಡಿಸಿಎಂ ಆಗಬೇಕು ಎಂಬುದು ಎಲ್ಲರಿಗೂ ಇರುತ್ತದೆ. ಯಾರು ಇಲ್ಲಿ ಸಂನ್ಯಾಸಿಗಳಲ್ಲ. ಜಡ್ಜ್ ಆದವರಿಗೆ ಪಟ್ಟೆವಾಲಾ ಆಗು ಅಂದ್ರೆ ಹೇಗೆ..? ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!