ತುಮಕೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕದನದ ನಡುವೆ ಬೇರೆ ಏನೇನೋ ಬೆಳವಣಿಗೆಗಳು ನಡೆಯುತ್ತಿವೆ. ಇದರ ನಡುವೆ ನವೆಂಬರ್ ಕ್ರಾಂತಿ ಹುಟ್ಟು ಹಾಕಿದ್ದ ರಾಜಣ್ಣ ಪತ್ರದ ಕ್ರಾಂತಿಗೆ ಚಾಲನೆ ನೀಡಿದ್ದಾರೆ. ಆ ಪತ್ರದಲ್ಲಿ ಏನಿತ್ತು..? ಯಾರ ಬಗ್ಗೆ ಬರೆದಿದ್ದರು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇತ್ತು. ಇದೀಗ ಆ ಬಗ್ಗೆ ರಾಜಣ್ಣರೇ ಮಾತನಾಡಿದ್ದಾರೆ.
ಆ ಬಗ್ಗೆ ಲೀಕ್ ಏನು. ದೇಶಕ್ಕೆ ಗೊತ್ತು. ನೀವುಗಳು ಕೇಳಿದ್ರೆ ನಿಮಗೂ ಕೊಡ್ತಾ ಇದ್ದೆ. ನಾನು ವೋಟ್ ಚೋರಿ ಬಗ್ಗೆ ನಾನು ಕೊಟ್ಟಂತ ಸ್ಟೇಟ್ಮೆಂಟ್ ಸಂಪೂರ್ಣವಾಗಿ ಓದಬೇಕು. ಪತ್ರಿಕೆಯಲ್ಲೂ ಬರೆದಿದ್ದೀನಿ. ಸಂಪೂರ್ಣ ನೋಡದೆ ಎರೆಉ ಲೈನ್ ನೋಡಿದರೆ. ನಮ್ಮದು ಸಂಪೂರ್ಣ ಜವಾಬ್ದಾರಿ ಇದೆ ಅಂತ ಹೇಳಿದ್ದೀನಿ. ನಮ್ಮದೇ ಸರ್ಕಾರ ಆಗ ಇತ್ತು. ನಮ್ಮ ಸರ್ಕಾರ ಇದ್ದಂತ ಸಂದರ್ಭದಲ್ಲಿ ಬಿಎಲ್ಎ, ಬಿಎಲ್ಒ.. ಅದು ಬಿಎಲ್ಒ ಅಲ್ಲ ಬಿಎಲ್ಎ. ಬೂತ್ ಲೆವೆಲ್ ಏಜೆಂಟ್ ಅಂದ್ರೆ ನಾವ್ ಮಾಡ್ತೀವಿ. ಎಲ್ಲಾ ಪಾರ್ಟಿ ಅವರಿಗೆ ಇದು ಅಧಿಕಾರ ಇರುತ್ತೆ.
ಈ ಮೂಲಕ ನಮ್ಮ ಜವಾಬ್ದಾರಿ ಏನಿರುತ್ತೆ ಅನ್ನೋದನ್ನ ಬರೆದಿದ್ದೆ. ಸಂಬಂಧ ಪಟ್ಟವರು ಮುತುವರ್ಜಿ ವಹಿಸಿದ್ದರೆ ಆ ರೀತಿಯ ಪ್ರಮಾದ ಆಗುವುದು ತಪ್ಪುತ್ತಾ ಇತ್ತು ಎಂಬುದನ್ನ ತಿಳಿಸಿದ್ದೇನೆ. ನಿಮ್ಮ ಮೀಡಿಯಾದವರಿಗೆ ಯಾವಾಗ ಬದಲಾಯಿಸಬೇಕು ಅನ್ಸುತ್ತೋ ಆಗ ಬರೆದುಕೊಳ್ಳುತ್ತಾ ಇರಿ ಅಷ್ಟೆ. ನವೆಂಬರ, ಡಿಸೆಂಬರ್, ಜನವರಿ 6, ಜನವರಿ 9. ರಾಮನಗರ ಎಂಎಲ್ಎ, ಇನ್ನೊಬ್ಬರು, ನಾನು ಹೇಳಬಹುದು. ಆದರೆ ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್ ಎಂದಿದ್ದಾರೆ.






