ಕಲಬುರಗಿ: ಈ ಬಾರಿಯ ಪಠ್ಯ ಪುಸ್ತಕ ಪರಿಷ್ಕರಣೆಯಾಗಿದ್ದು, ಈ ಬಾರಿ ಆರ್ಎಸ್ಎಸ್ ನ ಹೆಡ್ಗೇವಾರ್ ಪಠ್ಯವನ್ನು ಪಾಠದಲ್ಲಿ ಸೇರಿಸಲಾಗಿದೆ. ಇದಕ್ಕೆ ಹಲವರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಪಠ್ಯದಲ್ಲಿ ಹೆಡ್ಗೇವಾರ್ ವಿಚಾರ ಬೇಡ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಗೋಡ್ಸೆ ಯಾರು..? ಅವರು ಆರ್ ಎಸ್ ಎಸ್ ನವರೇ ಅಲ್ವಾ. ಇದರ ಸಂಸ್ಥಾಪಕ ಯಾರು 1925 ನೇ ಇಸವಿಯಲ್ಲಿ ಆರ್ ಎಸ್ ಎಸ್ ಹುಟ್ಟಿತ್ತು. ಆಗ ಸ್ವತಂತ್ರ್ಯ ಹೋರಾಟ ನಡೆಯುತ್ತಿತ್ತಲ್ಲ ಹೆಡ್ಗೇವಾರ್ ದು ಅದರಲ್ಲಿ ಏನು ಪಾತ್ರ..? ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟ ಮಾಡಿ ಜೈಲಿಗೇನಾದರೂ ಹೋಗಿದ್ದರಾ..? ಅದಕ್ಕೆ ಬೇಡ ಎಂದೆ ನಾನು ಎಂದಿದ್ದಾರೆ.
ಪಠ್ಯ ಆಯ್ಕೆ ಮಾಡುವ ವಿಚಾರದಲ್ಲಿ RSS ನವರು ಇರಬಾರದು ಎಂದು ಹೇಳಲಿಲ್ಲ. ನಮ್ಮ ಮಕ್ಕಳಿಗೆ ಸಂವಿಧಾನದ ಆಶಯಗಳಿದ್ದಾವಲ್ಲ ಅದನ್ನು ಹೇಳಿಕೊಡಬೇಕು. ಸಂತರು, ಸಮಾಜಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ ಅವರ ಬಗ್ಗೆ ತಿಳಿಸಿ. ದೇಶಕ್ಕೋಸ್ಕರ ಹೋರಾಟ ಮಾಡಿದವರ ಬಗ್ಗೆ ಹೇಳಿ. ದೇಶಕ್ಕೋಸ್ಕರ ತ್ಯಾಗ, ಬಲಿದಾನ ಮಾಡಿದ್ದಾರೆ, ಸಮಾಜಕ್ಕೋಸ್ಕರ ಜೀವನವೆಲ್ಲಾ ಹೋರಾಟ ಮಾಡಿದ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಇಂಥವರನ್ನೆಲ್ಲಾ ಮಾಡಿ. ಮಕ್ಕಳಿಗೆ ದೇಶದ ಬಗ್ಗೆ ಪ್ರೀತಿ ಬರಬೇಕು. ಜನರ ಬಗ್ಗೆ ಪ್ರೀತಿ ಬರಬೇಕು. ಮಕ್ಕಳಿಗೆ ದೇಶದ ಬಗ್ಗೆ ಪ್ರೀತಿ ಬರುವಂತೆ ಮಾಡಬೇಕು ಎಂದಿದ್ದಾರೆ.