ಚೆನ್ನೈ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದಾರೆ. ಆದರೆ ಇತ್ತಿಚೆಗೆ ಅಣ್ಣಾಮಲೈ ಕಾರಣದಿಂದಾಗಿ ಎಐಎಡಿಎಂಕೆ, ಬಿಜೆಪಿ ಜೊತೆಗಿನ ತನ್ನ ಮೈತ್ರಿ ಮುರಿದುಕೊಂಡಿದೆ. ಇದಕ್ಕೆ ಕಾರಣ ಅಣ್ಣಾಮಲೈ. ಸುಖಾ ಸುಮ್ಮನೆ ಅಣ್ಣಾಮಲೈ, ಪಕ್ಷದ ಹಿರಿಯ ನಾಯಕರ ಮೇಲೆ ಆರೋಪ ಮಾಡುತ್ತಾರೆ ಎಂದು ಎಐಎಡಿಎಂಕೆ ಹೇಳಿತ್ತು. ಇದೀಗ ಇದನ್ನ ಹೀಗೆ ಬಿಟ್ಟರೆ ಪಕ್ಷಕ್ಕೆ ಸಮಸ್ಯೆ ಎಂದು ಅರಿತ ಬಿಜೆಪಿ ಅಣ್ಣಾಮಲೈ ಅವರನ್ನ ಕಂಟ್ರೋಲ್ ಮಾಡುವುದಕ್ಕೆ ಹೊರಟಿದೆ.
ಈಗಾಗಲೇ ಅಣ್ಣಾಮಲೈ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್ ಸಲಹೆಯಂತೆ ದೆಹಲಿಗೆ ಬಂದಿರುವ ಅಣ್ಣಾಮಲೈ ಜೊತೆಗೆ ಬಿಜೆಪಿ ನಾಯಕರು ಒಂದಿಷ್ಟು ಮಾತುಕತೆ ನಡೆಸಿದ್ದಾರೆ. ನಿನ್ನೆಯಷ್ಟೇ ನಿರ್ಮಲಾ ಸೀತರಾಮ್ ಅವರನ್ನು ಭೇಟಿ ಮಾಡಿರುವ ಅಣ್ಣಾಮಲೈ, ಹಲವು ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲ ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರ ಜೊತೆಗೆ ಎಐಎಡಿಎಂಕೆ ಜೊತೆಗಿನ ಜಗಳದ ಕುರಿತು ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಕಳೆದ ವಾರವಷ್ಟೇ ಎಐಎಡಿಎಂಕೆ- ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಳೆದುಕೊಂಡಿದೆ. ಇದೀಗ ಅಣ್ಣಾಮಲೈ ವಿರುದ್ಧ ಹಲವು ಆರೋಪಗಳನ್ನು ಹಾಕಿರುವ ಎಐಎಡಿಎಂಕೆ, ಅವರನ್ನು ಪಕ್ಷದಿಂದ ಹೊರ ಹಾಕಿದರೆ ಮಾತ್ರ ಮತ್ತೆ ಮೈತ್ರಿ ಎಂದಿದೆ. ಹೀಗಾಗಿ ಬಿಜೆಪಿ ತಮಿಳುನಾಡಿನಲ್ಲಿ ಎಲ್ಲವನ್ನು ಸರಿ ಮಾಡುವ ನಿರ್ಧಾರ ಮಾಡಿದೆ. ಮೂಲತಃ ತಮಿಳರೇ ಆಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ತಮಿಳುನಾಡಿಗೆ ಉಸ್ತುವಾರಿ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.