ಬೆಂಗಳೂರು; ಒಂದನೇ ತರಗತಿಗೆ ಸೇರಿಸ ಬಯಸುವ ಮಕ್ಕಳನ್ನು ಶಾಲೆಗೆ ಸೇರಿಸುವ ಗೊಂದಲ ಸಾಕಷ್ಟು ಇದೆ. ಆರು ವರ್ಷ ಆಗಿರಲೇಬೇಕು ಎಂಬ ನಿಯಮದಿಂದ ಪೋಷಕರು ಸುಸ್ತಾಗಿ ಹೋಗಿದ್ದಾರೆ. ಐದು ವರ್ಷ ಆರು ತಿಂಗಳಾದ ಮಕ್ಕಳ ಭವಿಷ್ಯಕ್ಕೆ ಇದು ಸಮಸ್ಯೆ ಆಗಲಿದೆ ಎಂಬುದು ಪೋಷಕರ ಅಳಲು. ಈಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಬಳಿ ಪೋಷಕರು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

ಆದರೆ ಪೋಷಕರು ತಮ್ಮ ಜೊತೆಗೆ ಮಾಧ್ಯಮದವರನ್ನು ಕರೆದುಕೊಂಡು ಹೋಗಿದ್ದು, ಸಚಿವರ ಕೋಪಕ್ಕೆ ಕಾರಣವಾಗಿದೆ. ಮಾಧ್ಯಮದವರ ಬಳಿಯೇ ಕೇಳಿಕೊಳ್ಳಿ ಎಂದು ಹೇಳಿ ಸುಮ್ಮನಾಗಿದ್ದಾರೆ. ಶಿಕ್ಷಣ ಇಲಾಖೆಯೂ 2022ರ ಜೂನ್ 1ರಂದು ಒಂದು ಆದೇಶವನ್ನು ಹೊರಡಿಸಿತ್ತು. ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಬೇಕೆಂದರೆ ಅಂದಿಗೆ ಆರು ವರ್ಷ ತುಂಬಿರಲೇಬೇಕು ಎಂದು. ಈ ನಿಯನದ ವಿರುದ್ಧ ಪೋಷಕರು ಹೊಇರಾಟವನ್ನು ಮುಂದುವರೆಸಿದ್ದಾರೆ. ಅಟ್ಲಿಸ್ಟ್ ಐದು ಆರು ತಿಂಗಳಾಗಿರುವ ಮಕ್ಕಳಿಗೂ ಅಡ್ಮಿಷನ್ ಮಾಡಿಸಲು ಅನುಮತಿ ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ.

ಈಗ ಶೈಕ್ಷಣಿಕ ವರ್ಷ ಮುಗಿದಿದೆ. 2025-26ನೇ ವರ್ಷದ ಶೈಕ್ಷಣಿಕ ಹೊಸ ವರ್ಷ ಶುರುವಾಗುತ್ತಿದೆ. ಪೋಷಕರು ಮಕ್ಕಳನ್ನ ಶಾಲೆಗೆ ಸೇರಿಸಲು ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಾ ಇರುತ್ತಾರೆ. ಹೀಗಿರುವಾಗ ನಿಯಮ ಸಡಿಲಿಕೆ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಪೋಷಕರು ಇಂದು ಮಾಧ್ಯಮದವರ ಜೊತೆಗೆನೇ ಅನುಮತಿ ಕೇಳಲು ಹೋಗಿದ್ದರು. ಈ ನಡವಳಿಕೆ ಸಹಜವಾಗಿಯೇ ಸಚಿವ ಮಧು ಬಂಗಾರಪ್ಪ ಅವರಿಗೆ ಕೋಪ ತರಿಸಿದೆ. ಪೋಷಕರಿಗೆ ಯಾವುದೇ ರೀತಿಯ ಭರವಸೆಯನ್ನು ನೀಡದೆ ಹೋಗಿದ್ದಾರೆ.

