ನವದೆಹಲಿ: 2023-24 ರ ಕೇಂದ್ರ ಬಜೆಟ್ ಂಮಡನೆ ಮಾಡುತ್ತಿರುವ ನಿರ್ಮಲಾ ಸೀತರಾಮನ್ ಅವರು ಕೇಂದ್ರ ಸರ್ಕಾರ ನೀಡಿದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಭಾರತದ ಪ್ರಗತಿಯನ್ನು ಇಡೀ ಪ್ರಪಂಚವೇ ಕೊಂಡಾಡುತ್ತಿದೆ.
ಉಚಿತ ಆಹಾರ ವಿತರಣೆ ಒಂದು ವರ್ಷ ವಿಸ್ತರಣೆ. ಮುಂದಿನ ಒಂದು ವರ್ಷಕ್ಕೆ ಯೋಜನೆ ವಿಸ್ತರಣೆ. ಮುಂದಿನ ಒಂದು ವರ್ಷದಲ್ಲಿ ಬಡವರ ಮನೆಗೆ ಆಹಾರ ವಿತರಣೆ. 11.7 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಿದ್ದೇವೆ. 47 ಕೋಟಿ ಜನಧನ್ ಅಕೌಂಟ್ ಗಳು ಓಪನ್ ಆಗಿವೆ. 220 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ್ದೇವೆ. 14 ಕೋಟಿ ರೈತರಿಗೆ 2.60 ಲಕ್ಷ ಕೋಟಿ ಹಣ ನೀಡಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಸಹಾಯ ಮಾಡಿದ್ದೇವೆ.
81 ಲಕ್ಷ ಸ್ವಸಹಾಯ ಸಂಘದವರಿಗೆ ಸಹಾಯ ನೀಡಿದ್ದೇವೆ. ಮಹಿಳೆಯರು ಆರ್ಥಿಕತೆಯ ಸಬಲೀಕರಣದ ಗುರಿ ಹೊಂದಿದ್ದೇವೆ. ಕರಕುಶಲಕರ್ಮಿಗಳಿಗೆ ನೂತನ ಯೋಜನೆ. ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್. ಕೌಶಲ್ಯ ಅಭಿವೃದ್ದಿಗೆ ಭರಪೂರ ಸಹಾಯ ಮಾಡಿದ್ದೇವೆ ಎಂದಿದ್ದಾರೆ.