Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯಪಾಲರು ಭಾಷಣ ಓದದೆ ಇರುವುದಕ್ಕೆ ಸಿಎಂ ಏನಂದ್ರು..?

---Advertisement---

 

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಭಾಷಣ ಇದ್ದದ್ದಕ್ಕೆ ರಾಜ್ಯಪಾಲರು ಅಧಿವೇಶನದ ಭಾಷಣವನ್ನು ಓದಿರಲಿಲ್ಲ. ಅರ್ಧ ಓದಿ ಬಂದಿದ್ದರು. ಇದೀಗ ಗಣರಾಜ್ಯೋತ್ಸವದ ಭಾಷಣಕ್ಕೆ ಅದೇ ರೀತಿ ಮಾಡ್ತಾ ಇದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

 

ಭಾರತೀಯ ಸಂವಿಧಾನದ 163 ಮತ್ತು 176ನೇ ವಿಧಿಗಳು ಭಾಷಣ ಮಾಡಲೇಬೇಕು ಎಂದು ಸ್ಪಷ್ಟವಾಗಿ ಬಳಸುತ್ತವೆ ಎಂದು ಹೇಳಿದರು. ನಾವೂ ಏನು ಬರೆದುಕೊಡುತ್ತೇವೋ ಅದನ್ನು ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ  ಓದಲೇಬೇಕು ಎಂದಿದ್ದಾರೆ. ನಾಳೆ ನಾವೂ ಭಾಷಣವನ್ನು ಬರೆದುಕೊಡುತ್ತೇವೆ ಆದರೆ ರಾಜ್ಯಪಾಲರು ಅದನ್ನು ರಾಜ್ಯಪಾಲರು ಬದಲಾಯಿಸುತ್ತಾರೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು ಎಂಬ ಮಾತನ್ನ ಹೇಳಿದ್ದಾರೆ.

 

ಬಜೆಟ್ ಸಿದ್ಧತೆಗಳು, ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳು ಮತ್ತು ರಾಜ್ಯಪಾಲರ ಸಂವಿಧಾನಾತ್ಮಕ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಬಜೆಟ್ ಸಭೆಗಳು ಫೆಬ್ರವರಿ 2 ರಿಂದ ಪ್ರಾರಂಭವಾಗಲಿದ್ದು, ಪ್ರಸ್ತುತ ಹಣಕಾಸು ಇಲಾಖೆಯೊಂದಿಗೆ ಪ್ರಾಥಮಿಕ ಚರ್ಚೆಗಳು ನಡೆಯುತ್ತಿವೆ  ಎಂದು ಬಜೆಟ್ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಈ ಬಾರಿಯ ಬಜೆಟ್ ಮೇಲೂ ಸಹಜವಾಗಿಯೇ ಸಾಮಾನ್ಯ ಜನರಿಗೆ ನಿರೀಕ್ಷೆ ಇದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ರೈತರಿಗೆ ಏನೆಲ್ಲಾ ಕೊಡಬಹುದು ಎಂದು ಕಾಯುತ್ತಿದ್ದಾರೆ. ಗ್ಯಾರಂಟಿ ಸ್ಕೀಮ್ ಜೊತೆಗೆ ಮಹಿಳೆಯರಿಗೆ ಇನ್ನು ಹೆಚ್ಚಿನದ್ದನ್ನು ಕೊಡಬಹುದಾ ಎಂಬ ನಿರೀಕ್ಷೆಯೂ ಇದೆ. ಸಿಎಂ ಆಗಿ ದಾಖಲೆ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ವಿಚಾರದಲ್ಲೂ ಏನೆಲ್ಲಾ ಕೊಟ್ಟು ದಾಖಲೆ ಬರೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಜೆಟ್ ಆದ ಮೇಲೆ ಸಚಿವ ಸಂಪುಟ ಕೂಡ ಪುನರ್ ರಚನೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now