ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಭಾಷಣ ಇದ್ದದ್ದಕ್ಕೆ ರಾಜ್ಯಪಾಲರು ಅಧಿವೇಶನದ ಭಾಷಣವನ್ನು ಓದಿರಲಿಲ್ಲ. ಅರ್ಧ ಓದಿ ಬಂದಿದ್ದರು. ಇದೀಗ ಗಣರಾಜ್ಯೋತ್ಸವದ ಭಾಷಣಕ್ಕೆ ಅದೇ ರೀತಿ ಮಾಡ್ತಾ ಇದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಸಂವಿಧಾನದ 163 ಮತ್ತು 176ನೇ ವಿಧಿಗಳು ಭಾಷಣ ಮಾಡಲೇಬೇಕು ಎಂದು ಸ್ಪಷ್ಟವಾಗಿ ಬಳಸುತ್ತವೆ ಎಂದು ಹೇಳಿದರು. ನಾವೂ ಏನು ಬರೆದುಕೊಡುತ್ತೇವೋ ಅದನ್ನು ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಓದಲೇಬೇಕು ಎಂದಿದ್ದಾರೆ. ನಾಳೆ ನಾವೂ ಭಾಷಣವನ್ನು ಬರೆದುಕೊಡುತ್ತೇವೆ ಆದರೆ ರಾಜ್ಯಪಾಲರು ಅದನ್ನು ರಾಜ್ಯಪಾಲರು ಬದಲಾಯಿಸುತ್ತಾರೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು ಎಂಬ ಮಾತನ್ನ ಹೇಳಿದ್ದಾರೆ.
ಬಜೆಟ್ ಸಿದ್ಧತೆಗಳು, ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳು ಮತ್ತು ರಾಜ್ಯಪಾಲರ ಸಂವಿಧಾನಾತ್ಮಕ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಬಜೆಟ್ ಸಭೆಗಳು ಫೆಬ್ರವರಿ 2 ರಿಂದ ಪ್ರಾರಂಭವಾಗಲಿದ್ದು, ಪ್ರಸ್ತುತ ಹಣಕಾಸು ಇಲಾಖೆಯೊಂದಿಗೆ ಪ್ರಾಥಮಿಕ ಚರ್ಚೆಗಳು ನಡೆಯುತ್ತಿವೆ ಎಂದು ಬಜೆಟ್ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಈ ಬಾರಿಯ ಬಜೆಟ್ ಮೇಲೂ ಸಹಜವಾಗಿಯೇ ಸಾಮಾನ್ಯ ಜನರಿಗೆ ನಿರೀಕ್ಷೆ ಇದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ರೈತರಿಗೆ ಏನೆಲ್ಲಾ ಕೊಡಬಹುದು ಎಂದು ಕಾಯುತ್ತಿದ್ದಾರೆ. ಗ್ಯಾರಂಟಿ ಸ್ಕೀಮ್ ಜೊತೆಗೆ ಮಹಿಳೆಯರಿಗೆ ಇನ್ನು ಹೆಚ್ಚಿನದ್ದನ್ನು ಕೊಡಬಹುದಾ ಎಂಬ ನಿರೀಕ್ಷೆಯೂ ಇದೆ. ಸಿಎಂ ಆಗಿ ದಾಖಲೆ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ವಿಚಾರದಲ್ಲೂ ಏನೆಲ್ಲಾ ಕೊಟ್ಟು ದಾಖಲೆ ಬರೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಜೆಟ್ ಆದ ಮೇಲೆ ಸಚಿವ ಸಂಪುಟ ಕೂಡ ಪುನರ್ ರಚನೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.






