ಬಜೆಟ್ ಸಮಾಧಾನ ತಂದಿಲ್ಲ ಎಂದ ಆಪ್ತ ಇಕ್ಬಾಲ್ ಬಗ್ಗೆ ಡಿಕೆಶಿ ಏನಂದ್ರು..?

1 Min Read

ಬೆಂಗಳೂರು: ಬಜೆಟ್ ಬಗ್ಗೆ ತಮ್ಮ ಪಕ್ಷದವರೇ ಅಸಮಾಧಾನವನ್ನ ಹೊರ ಹಾಕಿದ್ದರು. ಇದು ವಿರೋಧ ಪಕ್ಷದ ನಾಯಕರಿಗೆ ಸುಲಭವಾಗಿ ಸಿಗುವಂತ ಆಹಾರವಾಗಿ ಬಿಡುತ್ತೆ. ಹೀಗಾಗಿ ತಮ್ಮವರೇ ಬಜೆಟ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದಕ್ಕೆ ಕಾಂಗ್ರೆಸ್ ನ ಹಲವು ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ. ಅವರನ್ನ ಪಕ್ಷದಿಂದ ಹೊರ ಹಾಕಿ ಅಂತಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಯಾಕೆ ಅವನಿಗೆ ಕೊಟ್ಟಿಲ್ವಾ. ಇಕ್ಬಾಲ್ ಹುಸೇನ್ ಏನು ಅಂತ ಗೊತ್ತು. ಅವರಿಗೆ ಕೋರ್ಟ್ ಕೊಟ್ಟಿಲ್ವಾ. ಕೋರ್ಟ್ ಜೊತೆಗೆ ಬೇರೆ ಬೇರೆದ್ದನ್ನು ಕೊಟ್ಟಿದ್ದೀವಿ ಎಂದಿದ್ದಾರೆ. ಇದೇ ವೇಳೆ ಶಾಸಕರು ನಮ್ಮನ್ನು ಮಂತ್ರಿ ಮಾಡಿ ಎನ್ನುತ್ತಿರುವ ಬಗ್ಗೆ ಮಾತನ್ನಾಡಿ, ತಪ್ಪೇನಿದೆ ಎಲ್ಲರಿಗೂ ಮಂತ್ರಿ ಆಗ್ಬೇಕು ಎಂಬ ಆಸೆ ಇದೆ. ನಾನು ಮೊದಲ ಬಾರಿಗೆ ಆಗಿರ್ಲಿಲ್ವಾ ಎಂದಿದ್ದಾರೆ.

ಇದೇ ವೇಳ ಒರಿಶಾದಿಂದ ಶಾಸಕರು ರಾಮನಗರ ರೆಸಾರ್ಟ್ ಗೆ ಬಂದಿರುವ ಬಗ್ಗೆ ಮಾತನ್ನಾಡಿ, ಯಾರು ಬಂದಿದ್ದಾರೆ, ಯಾಕೆ ಬಂದಿದ್ದಾರೆ ಅನ್ನೋದು ಇನ್ನು ನಂಗೆ ಗೊತ್ತಿಲ್ಲ. ಬಂದಿದ್ದಾರೆ ಅಂತ ನಮ್ಮ ಅಧ್ಯಕ್ಷರು ಫೋನ್ ಮಾಡಿದ್ರು. ನಾನು ಪಕ್ಷದ್ದು ಏನೋ ಇರಬೇಕು ಅಂತ ಬಂದು ಭೇಟಿ ಮಾಡ್ತೀನಿ ಅಂತ ಹೇಳಿದ್ದೀನಿ. ಮೈಸೂರ್ ಸುತ್ತಮುತ್ತ ನೋಡ್ಬೇಕು ಅಂತ ಅವರಿಗೆ ಆಸೆ ಇದೆ. ಬರ್ತೀನಿ ಅಂತ ತಿಳಿಸಿದ್ರು, ಬನ್ನಿ ಎಂದೆ. ಸ್ವಲ್ಪ ಆರಾಮವಾಗಿರೋ ಜಾಗ ಬೇಕು ಅಂದ್ರು ಅದಕ್ಕೆ ಹೇಳಿದ್ದೀವಿ. ಪಕ್ಷ ಏನನ್ನು ಹೇಳುತ್ತೋ ಅದನ್ನ ಮಾಡಬೇಕು ಅಲ್ವಾ. ಎಲ್ಲಾ ರಾಜ್ಯದಲ್ಲೂ ಇದು ನಡೆಯುತ್ತಾ ಇರೋದೆ. ಇಲ್ಲಿ ಮಾತ್ರ ಹೊಸದಲ್ಲ ಎಂಬ ಮಾತನ್ನ ಹೇಳಿದ್ದಾರೆ.

Share This Article