ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿದ್ದಾರೆ. ನಿನ್ನೆ ಆಡಿದ ಅವರ ಒಂದೊಂದು ಮಾತುಗಳು ಕೂಡ ಪ್ರಧಾನಿ ಮೋದಿಯವರ ಮನಸ್ಸನ್ನು ಮುಟ್ಟಿತ್ತು. ಇಂದು ಅವರ ಮಾತಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಹೆಸರನ್ನು ಸೂಚಿಸಿ, ಹಾಡಿ ಹೊಗಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಮಗೆಲ್ಲರಿಗೂ ಆದರ್ಶವಾಗಿರೋದು ಸನ್ಮಾನ್ಯ ದೇವೇಗೌಡ ಅವರು. ಇದು ಸಣ್ಣ ವಿಷಯವಲ್ಲ. ಈ ವಯಸ್ಸಿನಲ್ಲೂ ಕೂಡ ದೇಶ, ರಾಜ್ಯದ ವಿಚಾರಗಳ ಬಗ್ಗೆ ಚಿಂತನೆ ಮಾಡುತ್ತಾರೆ. ಆದರ್ಶವನ್ನು ನೀಡ್ತಾರೆ. ಇದಕ್ಕಿಂತ ದೊಡ್ಡ ಮಾರ್ಗದರ್ಶನ ನಮಗೆ ಬೇಕಾಗಿಲ್ಲ ಎಂದಿದ್ದಾರೆ.
ಇದೆ ವೇಳೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿ, ಪ್ರತಿಪಕ್ಷದ ನಾಯಕರು ಅಹ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಯಾವ ರೀತಿಯ ಕೆಲಸವನ್ನು ಮೆಚ್ಚಬೇಕೋ ಗೊತ್ತಿಲ್ಲ. ಅವರು ಸದನಕ್ಕೆ ಬಂದು ಮಾತನಾಡಲು ಬಹಳಷ್ಟು ಅಧ್ಯಯನ ಮಾಡುತ್ತಾರೆ. ಅವರು ಮಾರ್ಗದರ್ಶನ ಮಾಡುತ್ತಿರುವ ರೀತಿಯನ್ನು ನಾವು ಅಲ್ಲಗಳೆಯುವ ಹಾಗಿಲ್ಲ ಎಂದಿದ್ದಾರೆ.