Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಗಡು ಎಂದ ದರ್ಶನ್ ಗೆ ಉಮಾಪತಿ ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಕಾಟೇರ ಸಿನಿಮಾ ಒಳ್ಳೆ ಸಕ್ಸಸ್ ಕಂಡಿದೆ. ಒಟಿಟಿಯಲ್ಲಿ ರಿಲೀಸ್ ಆದ್ರೂ ಕೂಡ ಥಿಯೇಟರ್ ನಲ್ಲಿ ಓಡುತ್ತಲೇ ಇದೆ. ಇಂದಿಗೆ ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದಿವೆ. ಪ್ರಸ್ತುತ ದಿನಗಳಲ್ಲಿ‌ ಒಂದು ಸಿನಿಮಾ ಐವತ್ತು ದಿನ ಪೂರೈಸುವುದು ಎಂದರೆ ಸುಲಭದ ಮಾತಲ್ಲ. ಆ ಸಂಭ್ರಮವನ್ನು ಇಡೀ ತಂಡ ಇಂದು ಆಚರಣೆ ಮಾಡಿದೆ.

ಐವತ್ತು ದಿನದ ಸಂಭ್ರಮದಲ್ಲಿ ದರ್ಶನ್ ಮಾತನಾಡಿದ್ದು, ಸಿನಿಮಾದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ರಾಬರ್ಟ್ ವಿಚಾರ ಕೂಡ ಬಂದಿದೆ. ಹುಟ್ಟುಹಬ್ಬದ ದಿನ ಸಿಂಧೂರ ಲಕ್ಷ್ಮಣ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈ ಟೈಟಲ್ ಈ ಹಿಂದೆ ನಿರ್ಮಾಪಕ ಉಮಾಪತಿ ಅವರ ಬಳಿ ಇತ್ತು. ಇದೀಗ ಸಿ‌ನಿಮಾ ಅನೌನ್ಸ್ ಆಗಿದ್ದು, ಟೈಟಲ್ ಬಗ್ಗೆ ಮಾತನಾಡುವಾಗ ರಾಬರ್ಟ್ ವಿಚಾರವೂ ಬಂದಿದೆ. ನಾವೇ ಕಥೆ ಕೊಟ್ಟಿದ್ದು. ಯಾರೀ ತಗಡು ಎಂದಿದ್ದಾರೆ.

ಈ ವಿಚಾರಕ್ಕೆ ಇದೀಗ ಉಮಾಪತಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ದರ್ಶನ್​ ಅವರು ನನಗೆ ಮಾತಾಡಿದ್ರು ಎಂದು ಬೇಜಾರೇನಿಲ್ಲ. ಸಮಯ ಸಂದರ್ಭ ಹಾಗೇ ಮಾತಾಡಿಸಿರಬೇಕು. ಪದಗಳನ್ನು ಬಳಸಬೇಕಾದ್ರೆ ಚೂರು ಎಚ್ಚರಿಕೆಯಿಂದ ಇರಬೇಕು. ನಾನು ದರ್ಶನ್​ ಅವರ ಬೆಳವಣಿಗೆಯನ್ನೇ ಇಷ್ಟ ಪಡ್ತೀನಿ. ಅವರು ಬೆಳೆದಷ್ಟು ಒಂದಷ್ಟು ಜನಕ್ಕೆ ಮಾದರಿಯಾಗಿ ಇರ್ತಾರೆ. ಎಲ್ಲರಿಗೂ ಮಾದರಿಯಾಗಿ ಕೊನೆವರೆಗೂ ದರ್ಶನ್​ ಅವರು ಇರಬೇಕು ಎಂದು ನಾನು ಭಾವಿಸ್ತೀನಿ. ಕಾರಣ ಗೆಲುವು ಲೈಫ್​ ಟೈಮ್​ ಇರಲ್ಲ. ಗೆದ್ದಾಗ ತಗ್ಗಿಬಗ್ಗಿ ನಡೆಯಬೇಕು, ಸೋತಾಗ ಏನು ಮಾಡಿದ್ರು ನಡೆಯುತ್ತೆ. ಗೆದ್ದಾಗ ಎಲ್ಲರ ಕಣ್ಣು ನಮ್ಮ ಮೇಲೆ ಇರುತ್ತೆ, ಸೋತರೆ ಯಾರು ನಮ್ಮನ್ನು ನೋಡಲ್ಲ. ದರ್ಶನ್​ ಅವರು ಮಾತಾಡಿದ್ದು ಸೂಕ್ತ ಅನಿಸಲಿಲ್ಲ. ಅವರು ಮಾತಾಡಿದ್ದು ಅವರಿಗೆ ಸರಿ ಅನಿಸಬೇಕು. ನನ್ನಿಂದ ಏನಾದ್ರೂ ತಪ್ಪಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನದು ತಪ್ಪೇನಿಲ್ಲ, ಕ್ಷಮೆ ಕೇಳುವ ಪ್ರಮೇಯ ಕೂಡ ಇಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ನಾನು ಯೂಟರ್ನ್​ ಹೊಡೆಯೋ ಗಿರಾಕಿ ಅಲ್ಲ. ಸಮಸ್ಯೆ ಬಂದಾಗ ಬೆನ್ನು ತೋರಿಸಲ್ಲ, ನಂದೇನಿದ್ರೂ ಫೇಸ್​ ಟು ಫೇಸ್​​ ಅಷ್ಟೇ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!