ನವದೆಹಲಿ: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ನಾಳೆ ಸಚಿವೆ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನ ಅಧಿವೇಶನ ಆರಂಭಿಸುವುದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮಾತನಾಡಿದ್ದು, ಇದು ಈ ಮೂರನೆ ಅವಧಿಯ ಮೊದಲ ಪೂರ್ಣ ಬಜೆಟ್ ಆಗಿದೆ. 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.

ಈ ಬಜೆಟ್ ಹೊಸ ಆತ್ಮವಿಶ್ವಾಸವನ್ನು ಸೃಷ್ಟಿಸುತ್ತದೆ ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ. ದೇಶವಾಸಿಗಳು ಒಟ್ಟಾಗಿ ನಾವೂ ಈ ನಿರ್ಣಯವನ್ನು ಪ್ರಯತ್ನದಿಂದ ಈಡೇರಿಸುತ್ತೇವೆ. ಮೂರನೇ ಅವಧಿಯಲ್ಲಿ, ನಾವೂ ದೇಶದ ಸರ್ವತೋಮುಖ ಅಭಿವೃದ್ಧಿಯತ್ತ ಮಿಷನ್ ಮೋಡ್ ನಲ್ಲಿ ಮುನ್ನಡೆಯುತ್ತಿದ್ದೇವೆ. ನಾವೀನ್ಯತೆ, ಸೇರ್ಪಡೆ ಹಾಗೂ ಹೂಡಿಕೆ ಇದು ನಮ್ಮ ಆರ್ಥಿಕ ಚಟುವಟಿಕೆಯ ಮಾರ್ಗಸೂಚಿಯ ಆಧಾರವಾಗಿದೆ. ಬಜೆಟ್ ಅಧಿವೇಶನಕ್ಕೂ ಮುನ್ನ ಈ ಅಧಿವೇಶನದಲ್ಲಿ ಎಂದಿನಂತೆ ಹಲವು ಐತಿಹಾಸಿಕ ಮಸೂದೆಗಳು ಸದನದಲ್ಲಿ ಚರ್ಚೆಯಾಗಲಿದ್ದು, ವ್ಯಾಪಾಕ ಚಿಂತನ ಮಂಥನದ ಬಳಿಕ ರಾಷ್ಟ್ರದ ಬಲವನ್ನು ಹೆಚ್ಚಿಸುವ ಕಾನೂನುಗಳಾಗಲಿವೆ.
ಧರ್ಮ ಅಥವಾ ಪಂಥದ ಭೇದವಿಲ್ಲದೆ ಪ್ರತಿಯೊಬ್ಬ ಮಹಿಳೆ ಸಮಾನ ಹಕ್ಕುಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಯುವಕರೇ ದೇಶ, ಯುವಕರೇ ಶಕ್ತಿ ಎಂದು ನರೇಂದ್ರ ಮೋದಿ ಅವರು ಹೇಳಿದ್ದಾರೆ. ಬಜೆಟ್ ಅಧಿವೇಶನ ಆರಂಭವಾಗಿದ್ದು, ಚರ್ಚೆಗಳು ಶುರುವಾಗಿವೆ. ಅಧಿವೇಶನಕ್ಕೂ ಮುನ್ನ ರಾಷ್ಟ್ರಪತಿ ಮುರ್ಮಾ ಅವರು ಕೂಡ ಭಾಷಣ ಮಾಡಿ ಬಳಿಕ ಅಧಿವೇಶನ ಆರಂಭಿಸಲಿದ್ದಾರೆ. ನಾಳೆ ಮೋದಿ ಸರ್ಕಾರ, ದೇಶದ ಜನತೆಗೆ ಯಾವ ಥರದ ಗಿಫ್ಟ್ ಕೊಟ್ಟಿದ್ದಾರೆ ಎಂಬುದು ತಿಳಿಯಲಿದೆ.


