ಬೆಂಗಳೂರು : ಇಂದು 2023-24 ರ ರಾಜ್ಯ ಬಜೆಟ್ ಂಮಡನೆ ಮಾಡಲಾಗುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಎರಡನೇ ಬಾರಿ ಹಾಗೂ ಬಿಜೆಪಿಯ ಕೊನೆ ಬಜೆಟ್ ಇದಾಗಿದೆ. ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಂದಷ್ಟು ಅಭಿಲಾಷೆಗಳನ್ನು ನೀಡಿದ್ದಾರೆ.
ಪಿಎಂ ಶ್ರೀ ಯೋಜನೆಯಡಿ 100 ಕೋಟಿ ಮೀಸಲಿಟ್ಟಿದ್ದು, 9,556 ಶಾಲಾ ಕೊಠಡಿಗಳ ನಿರ್ಮಾಣ ಮಾಡಯವ ಗುರಿ ಹೊಂದಿದ್ದಾರೆ. 47 ವಸತಿ ಶಾಲಾ ಮತ್ತು ಸ್ಮಾರ್ಟ್ ಕ್ಲಾಸ್ ಅಭಿವೃದ್ಧಿ. ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ. ಗ್ರಂಥಪಾಲಕರ ವೇತನ 1000 ರೂ. ಹೆಚ್ಚಳ. ಗ್ರಾಮೀಣ ಶಾಲಾ ಮಕ್ಕಳಿಗೆ ಯೋಜನೆ. ಆಶಾ, ಬಿಸಿಯೂಟ ತಯಾರಕರ ಮತ್ತು ಸಹಾಯಕರ ಗೌರವಧನ ಹೆಚ್ಚಳ. ಟೈಲರ್ ಮಕ್ಕಳಿಗೂ ರೈತ ವಿದ್ಯಾನಿಧಿ.
ಕಾಲೇಜುಗಳು ಹಾಗೂ ಶಾಲಾ ಕೊಠಡಿಗಳ ಹೆಚ್ಚಳ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳು ತೀವ್ರಗತಿಯಲ್ಲಿ ಮುಂದುವರೆಯಲಿದೆ.