ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ ಇದೆ. ಅದರಂತೆ ಈ ಬಾರಿಯೂ ಗೊಂಬೆಗಳು ಭವಿಷ್ಯ ನುಡಿದಿವೆ. ನಿನ್ನೆ ರಾತ್ರಿ ತುಪ್ಪರಿಹಳ್ಳ ದಂಡೆಯ ಮೇಲೆ ಗೊಂಬೆಗಳನ್ನ ನಿರ್ಮಾಣ ಮಾಡಲಾಗಿತ್ತು. ಯುಗಾದಿಯಂದು ಆ ಗೊಂಬೆಗಳನ್ನು ನೋಡಿ, ಭವಿಷ್ಯವನ್ನು ಹೇಳುತ್ತಾರೆ. ಈ ಗೊಂಬೆಗಳ ಮೂಲಕ ರಾಜ್ಯ – ದೇಶದ ಭವಿಷ್ಯವನ್ನು ಹೇಳಲಾಗುತ್ತದೆ. ಸಾಕಷ್ಟು ಸಲ ಇಲ್ಲಿನ ಗೊಂಬೆ ಭವಿಷ್ಯ ನಿಜವಾಗಿದೆ. ಹೀಗಾಗಿ ಗೊಂಬೆಗಳ ಭವಿಷ್ಯದ ಮೇಲೆ ಕುತೂಹಲ ಇದ್ದೇ ಇರುತ್ತದೆ. ಹಾಗಾದ್ರೆ ಈ ಬಾರಿ ನುಡೊದ ಭವಿಷ್ಯ ಯಾವುದರೆ ಸೂಚನೆಯಾಗಿತ್ತು ಎಂಬ ಮಾಹಿತಿ ಇಲ್ಲಿದೆ.

ಇಲ್ಲಿ ಭವಿಷ್ಯ ತಿಳಿದುಕೊಳ್ಳುವುದಕ್ಕೂ ಮುನ್ನ ಯುಗಾ್ಇ ಅಮಾವಾಸ್ಯೆಯಂದು ತುಪ್ಪರಿ ಹಳ್ಳದಲ್ಲಿ ಒಂದು ಆಕೃತಿ ಮಾಡಿ ಅದರ ನಾಲ್ಕು ದಿಕ್ಕಿಗೆ ರಾಜಕೀಯ ಭವಿಷ್ಯ ನುಡಿಯುವ ಗೊಂಬೆಗಳನ್ನು ಇಡಲಾಗುತ್ತದೆ. ನಾಲ್ಕು ದಿಕ್ಕಿಗೆ ಅನ್ನದ ಉಂಡೆಯನ್ನಿಟ್ಟು, ಎಲ್ಲಾಮಳೆಯ ಹೆಸರಿನಲ್ಲಿ ಎಲೆಗಳನ್ನು ಹಾಕಲಾಗುತ್ತದೆ. ಹಿಂಗಾರು ಮಳೆಯ ಧಾನ್ಯಗಳನ್ನು ಇಲ್ಲಿ ಇಡಲಾಗುತ್ತದೆ. ಎತ್ತು, ಚಕ್ಕಡಿಯನ್ನು ಮಾಡಿ ಇಡಲಾಗುತ್ತದೆ. ಮಾರನೇಯ ದಿನ ಆ ಗೊಂಬೆಗಳನ್ನು ನೋಡಲು ಬರುತ್ತಾರೆ. ಯಾವುದಾದರೂ ಗೊಂಬೆಗೆ ಹಾನಿಯಾಗಿದ್ದರೆ ಅದರ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ.

ಈ ಬಾರಿ ಮುಂಗಾರು ಮಳೆ ಕಡಿಮೆಯಾದರೂ ಹಿಂಗಾರು ಮಳೆ ಕೈ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದೆ. ಗೋವಾ ದಿಕ್ಕಿನ ಸೇನಾಧಿಪತಿ ಗೊಂಬೆಗೆ ಹಾನಿಯಾಗಿದ್ದು, ಗೋವಾ ರಾಜಕಾರಣದಲ್ಲಿ ಧಕ್ಕೆಯಾಗಲಿದೆ ಎನ್ನಲಾಗಿದೆ. ಕೇಂದ್ರ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗಲ್ಲ, ಸಿಎಂ ಸಿದ್ದರಾಮಯ್ಯ ಅವರ ಖುರ್ಚಿಯು ಭದ್ರ ಎಂದೇ ಹೇಳಲಾಗಿದೆ. ಕಳೆದ ಬಾರಿ ಪ್ರಧಾನಿ ಮೋದಿಯವರ ಭವಿಷ್ಯವನ್ನು ಹೇಳಿತ್ತು. ಅವರೇ ಮತ್ತೆ ಪ್ರಧಾನಿ ಆಗ್ತಾರೆ ಎಂದ ಭವಿಷ್ಯ ನಿಜವಾಗಿದೆ.

