ಕಳೆದ ಮೂರು ದಿನದಿಂದ ಕಲಾಪ ನಡೆಯುತ್ತಿದೆ. ಆದರೆ ಬಿಜೆಪಿ ನಾಯಕರು ಸದನದಲ್ಲಿ ಗ್ಯಾರಂಟಿಗಳ ವಿಚಾರವಾಗಿ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದು, ಪ್ರತಿಭಟನೆ ನಡೆಸುತ್ತಿದ್ದರು. ಇಂದು ಚರ್ಚೆಗೆ ಅವಕಾಶ ಸಿಕ್ಕ ಹಿನ್ನೆಲೆ ಧರಣಿಯನ್ನು ವಾಪಾಸ್ ಪಡೆದಿದ್ದರು.
ಈ ಬೆನ್ನಲ್ಲೆ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗ್ಯಾರಂಟಿಯ ಯುದ್ಧ ನಡೆದಿದೆ. ಡಿಸಿಎಂ ಡಿಕೆಶಿ ಹಾಗೂ ಬಿಜೆಪಿ ಸದಸ್ಯರ ನಡುವೆ ಗ್ಯಾರಂಟಿ ಸಮರ ಸದನದಲ್ಲಿ ಜೋರಾಗಿ ನಡೆದಿದೆ.
ನಮ್ಮ ಗ್ಯಾರಂಟಿಗಳ ವಿಚಾರಕ್ಕೆ ಜನರು ತಕರಾರು ತೆಗಿತಿಲ್ಲ. ಬಿಜೆಪಿ ಅವರು ಪಕ್ಷದವರು ಪಶ್ಚತ್ತಾಪದಿಂದ ಪ್ರತಿಭಟಿಸುತ್ತಿದ್ದಾರೆ. ನಾವು ಜಾರಿ ಮಾಡಲು ಆಗಿಲ್ಲ ಅಂತ ಸಹಿಸಲು ಆಗ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದು, ಗ್ಯಾರಂಟಿಗಳನ್ನು ಜಾರಿ ಮಾಡುವುದಕ್ಕೆ ಷರತ್ತುಗಳನ್ನು ಯಾಕೆ ಹಾಕುತ್ತಿದ್ದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಕಲಾಪವನ್ನು ಮುಂಡೂಡಿಕೆ ಮಾಡಿದ್ದಾರೆ. ಊಟದ ನಂತರ ಮತ್ತೆ ಕಲಾಪ ಮುಂದುವರೆಯಲಿದೆ.