ಬೆಂಗಳೂರು: ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ ಅಷ್ಟೇ. ಆದ್ರೆ ಎಲ್ಲರ ಚಿತ್ತ ನೆಟ್ಟಿರುವುದು ಸಚಿವ ಸಂಪುಟದತ್ತ. ಯಾರು ಸೇರ್ಪಡೆ, ಯಾರು ಹೊರಗಡೆ ಎಂಬ ಬಗ್ಗೆ ಗಮನ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಸಿಎಂ ಕೂಡ ದೆಹಲಿಗೆ ಹೋಗಿ ಬಂದಿದ್ದಾರೆ.
ದೆಹಲಿಯಿಂದ ಬಂದ ಬಳಿಕ ಮಾತನಾಡಿದ ಅವರು, ದೆಹಲಿ ಯಾತ್ರೆ ಬಹಳ ಫಲಪ್ರದವಾಗಿದೆ. ಅಭಿವೃದ್ಧಿ ದೃಷ್ಟಿಯಿಂದ. ಜಲಶಕ್ತಿ ವಿಚಾರಕ್ಕೆ ಹಲವು ಪ್ರಮುಖ ಅಂತರಾಜ್ಯ ವಿಚಾರಗಳನ್ನೆಲ್ಲಾ ಚರ್ಚೆ ಮಾಡಲಾಗಿದೆ. ಈ ವೇಳೆ ಸಕಾರಾತ್ಮಕವಾದಂತ ಪ್ರತಿಕ್ರಿಯೆಗಳು ಸಿಕ್ಕಿವೆ. ಪವರ್ ಸ್ಟಕ್ಟರ್ ನಲ್ಲಿ ಸಾಕಷ್ಟು ವಿಚಾರವಿತ್ತು ಅದನ್ನು ಮಾತಾಡಿದ್ದೇವೆ.
ಡಿಫೆನ್ಸ್, ಶಿಕ್ಷಣ ವ್ಯವಸ್ಥೆ ಮಾತಾಡಿದ್ದೇನೆ. ಪರಿಸರ ಸಚಿವರನ್ನು ಭೇಟಿಯಾಗಿದ್ದೇನೆ. ಹೀಗಾಗಿ ದೆಹಲಿ ಪ್ರವಾಸ ಬಹಳ ಫಲಪ್ರದವಾಗಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಹಲವಾರು ವಿಚಾರ ಚರ್ಚೆ ಆಗಿದೆ. ರಾಜ್ಯದ ರಾಜಕಾರಣ, ಚುನಾವಣಾ ತಯಾರಿ, ನಮ್ಮ ಸಭೆ ಹೀಗೆ ಎಲ್ಲವೂ ಚರ್ಚೆಯಾಗಿದೆ. ನಮ್ಮ ಪಕ್ಷದ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಎಲ್ಲವೂ ಕೂಡ ಚರ್ಚೆಯಾಗಿದೆ ಎಂದಿದ್ದಾರೆ.
ಸಚಿವ ಸಂಪುಟದ ಬಗ್ಗೆಯೂ ಚರ್ಚೆಯಾಗಿದೆ. ವರಿಷ್ಠರ ಜೊತೆಗೂ ಮಾತಾಡಿ ಸಮಯ ನೀಡುವುದಾಗಿ ಹೇಳಿದ್ದಾರೆ. ಮತ್ತೆ ದೆಹಲಿಗೆ ಹೋಗುತ್ತೇನೆ. ಅವರು ಕರೆದಾಗಲಾದರೂ ಸರಿ. ಇಲ್ಲ ಅದಕ್ಕೂ ಮುಂಚೆಯಾದರೂ ಹೋಗುತ್ತೇನೆ ಎಂದಿದ್ದಾರೆ.