in ,

ಕಳೆದು ಹೋದ ಮೊಬೈಲ್ ಫೋನ್ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಮಾಡಿದ್ದೇನು ?

suddione whatsapp group join

ಚಿತ್ರದುರ್ಗ,(ಮಾರ್ಚ್.02) : ಕಳ್ಳತನ ಹಾಗೂ ಕಳೆದುಹೋದ ಮೊಬೈಲ್ ಪತ್ತೆಗೆ ನೆರವಾಗುವ ಸೆಂಟ್ರಲ್ ಏಕ್ಯುಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್ (Central Equipment Identity Register)  ವೈಬ್‍ಸೈಟ್‍ನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಈ ವೆಬ್‍ಸೈಟ್ ನೆರವಿನಿಂದ ಮೊಬೈಲ್ ಮಾಲೀಕರು ಕಳೆದು ಹೋದ ಮೊಬೈಲ್‍ಪೋನ್‍ಗಳನ್ನು ಬ್ಲಾಕ್ ಮಾಡಬಹುದು.

ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ರಜನಿಕಾಂತ್ ಅವರು ಕಳೆದು ಹೋದ ತಮ್ಮ ಮೊಬೈಲ್ ಫೋನ್ ವಿವರಗಳನ್ನು ಸಿಇಐಆರ್ ಪೋರ್ಟಲ್‍ನಲ್ಲಿ ನಮೂದಿಸಿದ್ದರು.

ರಜನಿಕಾಂತ್ ಅವರ ಮೊಬೈಲ್ ಫೋನ್ ಬೇರೆಯವರು ಉಪಯೋಗಿಸುತ್ತಿರುವುದನ್ನು ವೆಬ್ ಸೈಟ್ ಮೂಲಕ ಐಮಂಗಲ ಪೊಲೀಸ್ ಠಾಣೆಯ ಪಿಎಸ್‍ಐ ಸುರೇಶ್ ಹಾಗೂ ಸಿಬ್ಬಂದಿ ಮೋಹನ್ ಪತ್ತೆಹಚ್ಚಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅವರು ಪತ್ತೆಯಾದ ಮೊಬೈಲ್ ಪೋನ್‍ನ್ನು ಮಾಲೀಕ ರಜನಿಕಾಂತ್ ಅವರಿಗೆ ಗುರುವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಸ್ತಾಂತರಿಸಿದರು.

ಮೊಬೈಲ್ ಕಳೆದುಕೊಂಡವರು ಚಿತ್ರದುರ್ಗ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇದುವರಗೆ ಸಿಇಐಆರ್ ಪೋರ್ಟಲ್‍ನಲ್ಲಿ  17 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ಮೊಬೈಲ್ ಕಳ್ಳತನ ಅಥವಾ ಕಳೆದುಹೋದ ಸಂದರ್ಭದಲ್ಲಿ https://ww.ceir.gov.in/ವೆಬ್‍ಸೈಟ್‍ನ ಸದುಪಯೋಗ ಪಡೆದುಕೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿಎಆರ್ ಡಿವೈಎಸ್‍ಪಿ ಎಸ್.ಎಸ್.ಗಣೇಶ, ಎಎಸ್‍ಐ (ಗಣಕಯಂತ್ರ) ರಾಘವೇಂದ್ರ, ಪಿಎಸ್‍ಐ ಗುಡ್ಡಪ್ಪ, ಕಂಪ್ಯೂಟರ್ ಅಪರೇಟರ್ ನಟರಾಜ್ ಸೇರಿದಂತೆ ಮತ್ತಿತರರು ಇದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಮಧು ಬಂಗಾರಪ್ಪ ಹುಟ್ಟುಹಬ್ಬ : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಅಂಧ ಮಕ್ಕಳಿಗೆ ಹಣ್ಣು ವಿತರಣೆ

ಉದ್ಯೋಗ ವಾರ್ತೆ : ಮಾರ್ಚ್ 04 ರಂದು ವಾಕ್ ಇನ್ ಇಂಟವ್ರ್ಯೂವ್