Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

‘ಈ ‌ನನ್ ಮಗನನ್ನ ಸೋಲಿಸಬೇಕು ಅಂತ ಬಿಜೆಪಿಯವರೇ ಪ್ಲ್ಯಾನ್ ಮಾಡಿದ್ದಾರೆ’ : ಡಿಕೆಶಿ ಭೇಟಿ ಬಗ್ಗೆ ಸೋಮಶೇಖರ್ ಹೇಳಿದ್ದೇನು..?

Facebook
Twitter
Telegram
WhatsApp

 

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಮರಳಿ ಗೂಡಿಗೆ ಅನ್ನೋ ವಿಚಾರ ಸಾಕಷ್ಟು ಸದ್ದು ಮಾಡ್ತಾ ಇದೆ. ಕಾಂಗ್ರೆದ್ ಬಿಟ್ಟು ಬಿಜೆಪಿಗೆ ಹೋದವರು ಮತ್ತೆ ಕಾಂಗ್ರೆಸ್ ಗೆ ವಾಪಾಸ್ ಆಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ವಿಚಾರಕ್ಕೆ‌ ಸಂಬಂಧಿಸಿದಂತೆ ಇದೀಗ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮಾತಾಡಿದ್ದಾರೆ. ಬಿಜೆಪಿಯವರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

ಈ ನನ್ ಮಗನನ್ನು ಸೋಲಿಸಬೇಕು ಅಂತ ಬಿಜೆಪಿಯವರೇ ಆಡಿಯೋ ಮಾಡಿದ್ದಾರೆ. ಇದನ್ನೆಲ್ಲಾ ನೋಡ್ತಾ ಇದ್ರೆ ಬಿಜೆಪಿಯವರೇ ನನ್ನನ್ನ ಕಾಂಗ್ರೆಸ್ ಗೆ ಕಳುಹಿಸುತ್ತಾರೇನೋ. ಡಿಕೆ ಶಿವಕುಮಾರ್ ಅವರು ಇತ್ತಿಚೆಗೆ ನನ್ನ ಕ್ಷೇತ್ರಕ್ಕೆ ಬಂದಿದ್ರು. ಆದ್ರೆ ಅವರು ಬರ್ತಾ ಇರೋದನ್ನ ಅಧಿಕಾರಿಗಳು ಕೂಡ ಹೇಳಿರಲಿಲ್ಲ. ಬಂದಾದ ಮೇಲೆ ಅವರನ್ನು ಚೆನ್ನಾಗಿ ಮಾತಾಡಿಸಿದೆ. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿದ್ದೆ.

ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಹೀಗಾಗಿ ಅವರ ಬಳಿ ಹೇಳಿದಾಗ, ಅವರು ಅಧಿಕಾರಿಗಳಿಗೆ ತಿಳಿಸಿ ಸರಿ ಮಾಡಲು ಸೂಚಿಸಿದ್ದಾರೆ. ಈ ವೇಳೆ ಅವರ ಬಗ್ಗೆ ಒಳ್ಳೆಯ ಮಾತುಗಳನ್ನ ಆಡಿದ್ದೇನೆ. ಅದನ್ನ ಬಿಟ್ಟರೆ ಅವರ ಜೊತೆಗೆ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ಈ ನನ್ ಮಗನನ್ನ ಸೋಲಿಸಬೇಕು ಅಂತಾ ಸ್ಥಳೀಯ ಬಿಜೆಪಿವ್ರು ಆಡಿಯೋ ಮಾಡಿದ್ದಾರೆ. ನಾನೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಬಿಜೆಪಿ ಬಿಟ್ ಹೋಗಲ್ಲ. ಇದರಲ್ಲಿ ಅನುಮಾನ ಇಲ್ಲ. ನಾನು ಪಕ್ಷ ಬಿಡ್ತೀನಿ ಅಂತಾ ಹೇಳಿಲ್ಲ. ರಾಜ್ಯ ಮಟ್ಟದ ಬಿಜೆಪಿ ನಾಯಕರಲ್ಲಿ ನನಗೆ ಗೌರವ ಇದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮತ್ತೆ ಹೆಚ್ಚಾಯ್ತು ಅಡಿಕೆ ಬೆಲೆ : ರೈತರ ಮೊಗದಲ್ಲಿ ಸಂತಸವೋ ಸಂತಸ

ಅಡಿಕೆ ಬೆಳೆಗಾರರಲ್ಲಿ ಮತ್ತೆ ಖುಷಿಯಾಗುವ ದಿನ ಸಂಭವಿಸಿದೆ. 55 ಸಾವಿರ ರೂಪಾಯಿಗೆ ತಲುಪಿತ್ತು. ಆದರೆ ಇದ್ದಕ್ಕಿದ್ದ ಹಾಗೇ 44 ಸಾವಿರಕ್ಕೆ ಬಂದು ನಿಂತಿತ್ತು. ಇದು ಅಡಿಕೆ ಬೆಳೆಗಾರರಿಗೆ ಶಾಕ್ ಆಗಿತ್ತು. ಈಗ ಸ್ವಲ್ಪ ಸುಧಾರಿಸಿಕೊಳ್ಳುವ

ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶಾಕ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಮಂಡ್ಯ: ಇತ್ತೀಚೆಗಷ್ಟೇ ಸಂಪುಟ ಪುನರ್ ರಚನೆ ಆಗುತ್ತೆ ಎಂಬ ಚರ್ಚೆ ಜೋರಾಗಿತ್ತು. ಸಂಪುಟ ಪುನರ್ ರಚನೆಯಾಗುತ್ತೆ ಎಂದಾಗಲೇ ಈ ಬಾರಿ ನಮಗೂ ಅವಕಾಶ ಸಿಗುತ್ತೆ ಎಂಬನಿರೀಕ್ಷೆ ಹಲವರಿಗೆ ಹುಟ್ಟಿಕೊಂಡಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರ ಸಂಪುಟ

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 04 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ಡಿಸೆಂಬರ್. 04 ರ, ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ

error: Content is protected !!