ಬೆಂಗಳೂರು: ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಅಂತು ಆಗಿನೇ ಆಗುತ್ತೆ ಅನ್ನೋದು ಸದ್ಯದ ಬೆಳವಣಿಗೆ ನೋಡಿದ್ರೆ ಅನ್ನಿಸ್ತಾ ಇದೆ. ಯಾಕಂದ್ರೆ ಬೆಳಗ್ಗೆಯಿಂದಾನೂ ಡಿಕೆ ಶಿವಕುಮಾರ್ ಸಿಎಂ ಆಗುವುದಕ್ಕೆ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ ಅಂತಾನೇ ಹೇಳಲಾಗ್ತಿದೆ. ನವೆಂಬರ್ 21ಕ್ಕೆ ಸಿಎಂ ಆಗುವುದಕ್ಕೆ ದಿನಾಂಕ ಕೂಡ ನಿಗದಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಬಳಿ ಪ್ರಶ್ನೆ ಕೇಳಿದಾಗ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ನಿಂಗೆ ಹೇಳೀದ್ರಾ..? ನಿಂಗೆ ಹೇಗೆ ಗೊತ್ತಾಯ್ತು..? ಯಾವ ಪತ್ರಿಕೆಯಲ್ಲಿ ಬಂದಿದೆ ತೋರಿಸು. ನಾನು ಎಲ್ಲಾ ಪತ್ರಿಕೆಯನ್ನು ಓದುತ್ತೇನೆ ತೋರಿಸು ನೋಡೋಣಾ ಎಂಬ ಮಾತನ್ನ ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಮತ್ತೆ ಅವರನ್ನೇ ಪ್ರಶ್ನೆ ಮಾಡಿ ಮುಂದೆ ಸಾಗಿದ್ದಾರೆ.
ಪದಗ್ರಹಣ ಮಾತಿಗೂ ಮುಂಚೆ ಅಲೆಮಾರಿ ಸಮುದಾಯದವ ಮನವಿ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಅಲೆಮಾರಿಗಳ ಮಹಾ ಒಕ್ಕೂಟ ಮನವಿ ಮಾಡಿಕೊಂಡಿದೆ. 1% ಪರ್ಸೆಂಟ್ ಮೀಸಲಾತಿ ಇತ್ತು. ಈಗ ಸಿ ಗ್ರೂಪ್ ನಲ್ಲಿ ಸೇರಿಸಿ ಬಿಟ್ಟಿದ್ದೀರಿ. ನಮಗೆ ಪ್ರತ್ಯೇಕವಾಗಿ 1% ಮೀಸಲಾತಿ ನೀಡಿ ಎಂದು ಕೇಳಿದ್ದಾರೆ. ಅಭಿವೃದ್ಧಿ ನಿಗಮ ಮಾಡಬೇಕು, ಎಕಾನಮಿಕ್ ಪ್ಯಾಕೇಜ್ ಅನ್ನು ನೀಡಬೇಕು ಅಂತ ಕೇಳಿದ್ದಾರೆ. ನಾವೂ ರಿಕ್ವೆಸ್ಟ್ ಮಾಡಿದ್ದೀವಿ. ಸಾಮಾಜಿಕ ನ್ಯಾಯದ ಪರ ಇರುವವರು, ನಿಮಗೆ 1% ಕೊಡುವುದಕ್ಕೆ ಯಾವ ಥರ ಮಾಡಬೇಕು ಅನ್ನೋದನ್ನ ಚರ್ಚೆ ಮಾಡ್ತೀವಿ. ಆ ನಂತರ ತೀರ್ಮಾನ ಮಾಡ್ತೀವಿ. ನಮ್ಮ ಮೇಲೆ ವಿಶ್ವಾಸ ಇಡಿ ಅಂತ ಹೇಳಿದ್ದೀವಿ. ಅಭಿವೃದ್ಧಿ ನಿಗಮ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂಬ ವಿಶ್ವಾಡಸ ನೀಡಿದ್ದೇನೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















