ಮೋದಿ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿದ್ದೇನು..?

ದೆಹಲಿ: ನಾನು ಕೃಷ್ಣ ಭೈರೇಗೌಡ, ರೆವಿನ್ಯೂ ಮಂತ್ರಿ ಸೇರಿ ಪ್ರಧಾನ ಮಂತ್ರಿಗಳನ್ನ ಭೇಟಿ ಮಾಡಿದ್ದೆವು. ರಾಜ್ಯದಲ್ಲಿ ಮಳೆಯಿಂದ 14ಲಕ್ಷದ 58 ಸಾವಿರ ಹೆಕ್ಟೇರ್ ಬೆಳೆಹಾನಿ ಆಯ್ತು. ನಾವೂ ಎಲ್ಲವನ್ನು ಜಂಟಿ ಸರ್ವೆ ಮಾಡಿಸಿದ್ದೀವಿ. 3 ಸಾವಿರದ 550 ಕೋಟಿ ಆಸ್ತಿ ಹಾನಿಯಾಗಿದೆ. ಬೆಳೆಹಾನಿ 10,700 ಕೋಟಿ ಆಗಿದೆ. ಇಷ್ಟು ಕೋಟಿ ಕರ್ನಾಟಕ ರಾಜ್ಯದಲ್ಲಿ ಹಾನಿಯಾಗಿದೆ. ಇದೆಲ್ಲವನ್ನು ಮೋದಿಯವರಿಗೆ ತಿಳಿಸಿದ್ದೇವೆ.

ಅಪ್ಪರ್ ಕೃಷ್ಣ ಅಂತಿಮ ವರದಿ ಬಂದು 10 ವರ್ಷಗಳಾಯ್ತು. ಇವತ್ತಿನವರೆಗೂ ಅದರ ಬಗ್ಗೆ ಏನು ಮಾಡಿಲ್ಲ. ಮೇಕೆದಾಟು ಬಗ್ಗೆಯೂ ಮಾತನಾಡಿದ್ದೇವೆ. ನಾಲ್ಕೈದು ದಿನಗಳ ಹಿಂದೆ ತಮಿಳುನಾಡು ಅವರು ಹಾಕಿರುವುದು ವಜಾ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ, ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಅವರು ಹೇಳಬೇಕು. ಕೋರ್ಟ್ ನಲ್ಲಿ ಆದೇಶ ಇಲ್ಲ, ಮಾಡುವುದಕ್ಕೂ ಸಮಸ್ಯೆ ಇಲ್ಲ. ಮೇಕೆದಾಟು ಯೋಜನೆಯಲ್ಲಿ ನೀರನ್ನ ಶೇಖರಣೆ ಮಾಡ್ತೀವಿ. ಅದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನ ತಿಳಿಸಿದ್ದಾರೆ.

ಸುಮಾರು 76% ಕೆಲಸ ಆಗಿದೆ. ಕೇಂದ್ರ ಸರ್ಕಾರ ಕೊಟ್ಟಿಲ್ಲ ಅಂತ ಕೆಲಸವನ್ನ ನಿಲ್ಲಿಸಿಲ್ಲ. ಕೇಂದ್ರ ಸರ್ಕಾರ ಕೊಟ್ಟು ಬಿಟ್ಟರೆ ಕಾಂಟ್ರಾಕ್ಟರ್ ಗಳಿಗೆಲ್ಲಾ ಏನು ಬಿಲ್ ಕೊಡಬೇಕು ಅದನ್ನ ಕೊಡೋದಕ್ಕೂ ಅನುಕೂಲವಾಗುತ್ತೆ. ಇದು ಜೆಜಿಎಂಗೆ ಸಂಬಂಧಪಟ್ಟಿದ್ದಾಗಿದೆ. ರಾಯಚೂರು ಜಿಲ್ಲೆಯಲ್ಲಿ ಏನ್ ಎಸ್ಟಾಬ್ಲಿಶ್ ಮಾಡಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರವನ್ನ ರಿಕ್ವೆಸ್ಟ್ ಮಾಡಿದ್ದೀವಿ ಎಂದಿದ್ದಾರೆ. ಮೇಕೆದಾಟು, ಕೃಷ್ಣ, ಮಹದಾಯಿ ಸೇರಿದಂತೆ ಐದು ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಬಹಳ ಮುಖ್ಯವಾಗಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ.

 

Share This Article