ಇಂದು ಹೊಸ ವರ್ಷದ ಆಚರಣೆ ಎಲ್ಲೆಡೆ ಜೋರಾಗಿ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆಲ್ಲ ಶಿವಣ್ಣ ಹೊಸ ವರ್ಷದ ಶುಭಾಶಯ ತಿಳಿಸಿ, ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಮಾಹಿತಿ ಹಂಚಿಕೊಂಡಿದ್ದಾರೆ. ಗೀತಕ್ಕನು ಜೊತೆಗೆ ಇದ್ದಾರೆ.
‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮಾತನಾಡಬೇಕಾದರೆ ನನಗೆ ಭಯವಾಗುತ್ತದೆ. ಯಾಕಂದ್ರೆ ಮಾತನಾಡುವಾಗ ಭಾವುಕನಾಗಿ ಬಿಡುತ್ತೇನೆ ಎನಿಸುತ್ತದೆ. ಅಮೆರಿಕಕ್ಕೆ ಹೊರಡುವ ಸಮಯದಲ್ಲಿ ಟೆನ್ಶನ್ ಜಾಸ್ಯಿಯಾಗಿತ್ತು. ಆದರೆ ಇಲ್ಲಿಗೆ ಬಂದ ಮೇಲೆ ಎಲ್ಲರೂ ನನ್ನನ್ನು ಮಗು ರೀತಿ ನೋಡಿಕೊಂಡಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳು. ಎಲ್ಲರೂ ನನಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿದೆ ಎಂದುಕೊಂಡಿದ್ದಾರೆ. ಆದರೆ ದೇಹದ ಒಳಗೆ ಯೂರೋನರಿ ಬ್ಲಾಡರ್ ತೆಗೆದು ಹೊಸ ಬ್ಲಾಡರ್ ಹಾಕಿದ್ದಾರೆ. ಯಾರೂ ಬೇರೆ ಏನೋ ತಿಳಿದುಕೊಳ್ಳುವುದು ಬೇಡ. ನಾವೂ ಡಿಟೇಲ್ ಆಗಿ ಹೇಳುವುದಕ್ಕೆ ಹೋದರೆ ಎಲ್ಲರೂ ಗಾಬರಿಯಾಗಿ ಬಿಡುತ್ತಾರೆ. ಅದಕ್ಕೆ ಏನೇ ಇದ್ದರೂ ನಮಗೆ ಇರಲಿ. ಎಲ್ಲರಿಗೂ ಒಳ್ಳೆಯ ಮಾಹಿತಿ ಕೊಡಬೇಕು ಅಷ್ಟೇ.
ಎಲ್ಲದರಲ್ಲೂ ನಮ್ಮ ಜೊತೆಗೆ ನೀವಿದ್ದೀರಿ ಎಂಬುದೇ ನಮಗೆ ದೊಡ್ಡ ಶಕ್ತಿ. ವೈದ್ಯರು ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. ಮೊದಲು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ದಿನ ಎಲ್ಲವನ್ನು ಸರಿಯಾಗಿ ಪಾಲನೆ ಮಾಡಿ, ಆ ಬಳಿಕ ಮೊದಲಿನಂತೆ ಏನು ಬೇಕಾದರೂ ತಿನ್ನಿ ಎಂದಿದ್ದಾರೆ. ಐ ವಿಲ್ ಬಿ ಬ್ಯಾಕ್.. ಶಿವಣ್ಣ ಹೇಗಿದ್ದನೋ ಮೊದಲಿಗಿಂತ ಡಬಲ್ ಪವರ್ ಇದ್ದೇ ಇರುತ್ತದೆ. ಡ್ಯಾನ್ಸ್, ಫೈಟ್, ಲುಕ್ ಎಲ್ಲವನ್ನು ಮತ್ತೆ ನೋಡುತ್ತೀರಾ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.