ಬೆಂಗಳೂರು: ಬಿಜೆಪಿ ಸರ್ಕಾರವಿದ್ದಾಗಂತು 40% ಕಮಿಷನ್ ದಂಧೆ ಜೋರು ಸದ್ದು ಮಾಡಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಿಜೆಪಿ ಮೇಲೆ 40% ಕಮಿಷನ್ ಆರೋಪ ಮಾಡಿದ್ರು. ಇದೀಗ ಕಾಂಗ್ರೆಸ್ ಸಚಿವರ ಮೇಲೂ ಕಮೀಷನ್ ಆರೋಪ ಕೇಳಿ ಬಂದಿದ್ದು, ಕೆಂಪಣ್ಣ ಇಂದು ಸುದ್ದಿಗೋಷ್ಟಿ ನಡೆಸಿ, ಅದಕ್ಕೊಂದು ಕ್ಲಾರಿಟಿ ಕೊಟ್ಟಿದ್ದಾರೆ.
ಸರ್ಕಾರದ ವಿರುದ್ಧ ನಾವೂ ಯಾರೂ ಕಮಿಷನ್ ಆರೋಪ ಮಾಡಿಲ್ಲ. ಏಳು ತಿಂಗಳಿನಿಂದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಲು ಕೇಳಿಕೊಂಡಿದ್ದೇವೆ. ಅದರಲ್ಲಿ ಸ್ವಲ್ಪ ಹಣ ಮಾತ್ರ ಬಿಡುಗಡೆಯಾಗಿದೆ. ನಾವೂ ಸಿಎಂ ಸಿದ್ದರಾವರ ಬಳಿಯೂ ಮನವಿ ಮಾಡಿದ್ದೇವೆ. ಎಷ್ಟು ತಿಂಗಳಿಂದ ಅಂತ ಅವ್ರು ಕೇಳಿದ್ರು. ನಾವೂ ಮೂರು ವರ್ಷದಿಂದ ಎಂದು ಹೇಳಿದ್ದೇವೆ. ನಾವೂ ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಾ. ಸ್ವಲ್ಪ ಸಮಯ ಕೊಡಿ ಎಂದು ಕೇಳಿದ್ದಾರೆ. ಯಾವ ಗುತ್ತಿಗೆದಾರ ಕೂಡ ಬಂದು ನನ್ನ ಬಳಿ ದೂರು ನೀಡಿಲ್ಲ. ಯಾರೋ ಮೂರನೇ ವ್ಯಕ್ತಿ ನೀಡಿರಬಹುದು.
ನಾವೂ ಈ ಹಿಂದೆ 40%ಕಮಿಷನ್ ದಂಧೆ ನಡೆಯುತ್ತಿದೆ ಎಂದು ಹೇಳಿದ್ದೆವು. ಅದರ ದಾಖಲೆ ಕೂಡ ಇದೆ. ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಲು ಸಾಕಷ್ಟುಪ್ರಯತ್ನ ನಡೆಸಿದ್ದೆವು. ಅದು ಸಾಧ್ಯವಾಗಲಿಲ್ಲ. ಕಡೆಗೆ ಅವರಿಗೆ ಚೀಟಿಯನ್ನು ಕೊಟ್ಟೆವು. ಅದನ್ನು ಜೇಬಲ್ಲಿ ಇಟ್ಟುಕೊಂಡು ಸುಮ್ಮನೆ ಆದರು. ಕರೆದು ಮಾತನಾಡುವ ಕೆಲಸ ಮಾಡಲಿಲ್ಲ. ಬೇಕಾದವರಿಗೆ ಹಣ ಬಿಡುಗಡೆ ಮಾಡಿದರು.
ಬಾಕಿ ಬಿಲ್ ಪಾವತಿಗೆ ಮೊದಲಿ ನಾವು ಮೊದಲು ಆರಂಭ ಮಾಡಿದಾಗ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆಗೆ ಪತ್ರ ಕೊಟ್ಟೆವು. ಬಳಿಕ ಪ್ರಧಾನಿಗೆ ಪತ್ರ ಕೊಟ್ಟೆವು. ಸಿದ್ದರಾಮಯ್ಯ, ಕುಮಾರಸ್ವಾಮಿ ಪತ್ರ ಕೊಟ್ಟೆವು. ಕುಮಾರಸ್ವಾಮಿ ನಮ್ಮ ಕೇಸ್ ತಗೋಳಲಿಲ್ಲ. ಸಿದ್ದರಾಮಯ್ಯ ಕೂಡ ಕೇಸ್ ತೆಗೆದುಕೊಳ್ಳಲಿಲ್ಲ. ಲೀಡರ್ ಆಫ್ ಆಪೋಸೀಷನ್ ಆಗಿ ಸಿದ್ದರಾಮಯ್ಯ ಕರೆದರು ಹೋದೆ ಎಂದಿದ್ದಾರೆ.