ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಅದರಲ್ಲೂ ಈ ಯೋಜನೆಯ ಫಲಾನುಭವಿಗಳಿಗೆ ಆಗಾಗ ಕಂತಿನ ಹಣ ಮಿಸ್ಸಾಗ್ತಾನೆ ಇರುತ್ತೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ವಿರೋಧಿಸಿದ್ದು, ಐದು ಸಾವಿರ ಕೋಟಿ ಹಣ ಮಹಿಳೆಯರಿಗೆ ತಲುಪದೆ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಪ್ರಶ್ನೆಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಐದು ಸಾವಿರ ಕೋಟಿ ಹಣ ಯಾವುದು ಹಗರಣವಾಗಿಲ್ಲ. ಸುಮ್ಮನೆ ಇದೆಲ್ಲ ಮಾತನಾಡುವುದು ಸರಿಯು ಅಲ್ಲ. ಆರೋಪ ಮಾಡಬೇಕು ಒಕೆ. ಎರಡು ತಿಂಗಳಿನ ಹಣ ಹೋಗಿಲ್ಲ. ಅದಕ್ಕೆ ಐದು ಸಾವಿರ ಕೋಟಿ ಲೂಟಿ ಆದಂಗೆ ಹೇಗೆ ಆಗುತ್ತೆ. ಏನು ಟೆಂಡರ್ ಆಗಿದೆಯಾ..? ಬೇರೆ ಅಕೌಂಟ್ ಗೇನಾದರೂ ಹೋಗಿದೆಯಾ..? ನೀವುಗಳು ಆ ಪ್ರಶ್ನೆಯನ್ನ ಕೇಳಬೇಕು. ಅದಾನಿ ಹೊಡೆದುಕೊಂಡವರಲ್ಲ ಲಕ್ಷಾಂತರ ಕೋಟಿ, ಅಂಬಾನಿ ಹೊಡೆದುಕೊಂಡಿದ್ದಾರಲ್ಲ ಲಕ್ಷಾಂತರ ಕೋಟಿ ಇವರೆಲ್ಲಾ ಅವರ ಲಾಭದಾಯಕರು.
ಎಲೆಕ್ಟ್ರಲ್ ಬಾಂಡ್ ನಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದವರಲ್ಲ, ಇವರಿಗೇನಾದರೂ ಅರ್ಹತೆ ಇದೆಯಾ ನಮ್ಮ ಬಗ್ಗೆ ಮಾತನಾಡುವುದಕ್ಕೆ. 2 ತಿಂಗಳು ಹಣ ಹಾಕಿಲ್ಲ. ಲಕ್ಷ್ಮೀ ಅವರು ಬಂದು ಆ ಬಗ್ಗೆ ತಿಳಿಸಿದ್ದಾರೆ. ಲೂಟಿ ಮಾಡೋದಕ್ಕೆ ಏನಿದೆ ಅದರಲ್ಲಿ. ಸ್ವಾಮಿ ನಾವಿರೋದೆ ಮೂರು ರಾಜ್ಯದಲ್ಲಿದ್ದೀವಪ್ಪ, ಇಪ್ಪತ್ತು ರಾಜ್ಯದಲ್ಲಿ ಅವರೇ ಇದ್ದಾರೆ. ಕೇಂದ್ರ ಸರ್ಜಾರ ಅವರದ್ದೇ ಇದೆ. ವಂದೇ ಮಾತರಂ ಅಂತ ಹೇಳ್ತಾ ಇದ್ದಾರಲ್ಲ, ಎಲ್ಲಾ ಭೂಮಿಗಳನ್ನು, ಏರ್ಪೋರ್ಟ್ ಗಳು ಅದಾನಿಗೆ ಕೊಟ್ಟು ಕೂತ್ಕೊಂಡವ್ರೆ. ಇಲ್ಲಿ ಬಂದು ವಂದೇ ಮಾತರಂ ಬಗ್ಗೆ ಹಾಡು ಆಡ್ತಾರೆ ಎಂದು ಗರಂ ಆಗಿದ್ದಾರೆ.

