ಬೆಂಗಳೂರು; ಬಿಜೆಪಿಯಲ್ಲಿಯೇ ಇದ್ದುಕೊಂಡು ಮುಖ್ಯಮಂತ್ರಿ ಆಗಿದ್ದವರ ಫ್ಯಾಮಿಲಿಯನ್ನೇ ಟಾರ್ಗೆಟ್ ಮಾಡಿಕೊಂಡು ವಾಗ್ದಾಳಿ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದಾರೆ. ಇದು ಹಲವರಿಗೆ ಆತಂಕವನ್ನು ಉಂಟು ಮಾಡಿದೆ. ಈಗಾಗಲೇ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರಿಗೂ ಶಿಸ್ತು ಸಮಿತಿ ನೋಟೀಸ್ ಜಾರಿ ಮಾಡಿದೆ. ಹೀಗಾಗಿ ಹಲವರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಎಸ್.ಟಿ.ಸೋಮಶೇಖರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಯತ್ನಾಳ್ ಅವರು ಉಚ್ಛಾಟನೆಯಾಗಬೇಕಿತ್ತು. ಆಗಿಂದಲೂ ಅವರು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧವೇ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಮಂತ್ರಿಗಳಿಗೇನೆ ಮುಜುಗರ ಆಗ್ತಾ ಇತ್ತು. ಹಾಗೆಲ್ಲಾ ಮಾತನಾಡಬಾರದು ಅಂತಾನೇ ಆ ಸಮಯದಲ್ಲಿ ನಾನು ಹೇಳಿದ್ದೆ. ಹೈಕಮಾಂಡ್ ಕೂಡ ಆ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳದೆ ಇದ್ದದ್ದು ನೋಡಿ, ಹೈಕಮಾಂಡ್ ವೀಕ್ ಇದ್ಯಾ ಅಂತಾನೇ ಎಲ್ಲರೂ ಮಾತಾಡ್ತಾ ಇದ್ದರು. ಆದರೆ ಯತ್ನಾಳ್ ಬೇರೆಯವರ ಮಾತು ಕೇಳಲ್ಲ. ತನಗೆ ಅನ್ನಿಸಿದ್ದನ್ನ ಮಾಡುವವರು. ಒಂದು ಮೂಲಗಳ ಮಾಹಿತಿ ಪ್ರಕಾರ ಅಸೆಂಬ್ಲಿ ಮುಗಿದ ಬಳಿಕ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಬಹುದು ಎನ್ನಲಾಗಿತ್ತು ಎಂದಿದ್ದಾರೆ.

ಯತ್ನಾಳ್ ಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ. ಯತ್ನಾಳ್ ನಾತನಾಡುವಂತ ರೀತಿ, ಪಕ್ಷದ ಬಗ್ಗೆ ಹೇಳುವ ರೀತಿ, ಯಾವತ್ತು ಕೂಡ ನಾವೂ ಪಕ್ಷದ ಬಗ್ಗೆ ಆಗಲಿ, ನಾಯಕರಿಗಾಗಲಿ ಮುಜುಗರವಾಗುವಂತ ಕೆಲಸವನ್ನ ನಾನು ಮಾಡಿಲ್ಲ ಎಂದಿದ್ದಾರೆ. ಎಸ್.ಟಿ.ಸೋಮಶೇಖರ್ ಪಕ್ಷದ ಬಗ್ಗೆ ವಿರೋಧವಾಗಿ ಮಾತನಾಡುವ ಪ್ರಯತ್ನ ಮಾಡಿಲ್ಲ. ಆದರೆ ಕಾಂಗ್ರೆಸ್ ನಾಯಕರ ಜೊತೆಗೆ ಹೆಚ್ಚು ಗುರುತಿಸಿಕೊಳ್ಳುತ್ತಿರುತ್ತಾರೆ.

