Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಮೈಸೂರಲ್ಲಿ ಸಿಕ್ಕ 5 ನಿಮಿಷದಲ್ಲಿ ಡಿಕೆಶಿಗೆ ರಾಹುಲ್ ಗಾಂಧಿ ಹೇಳಿದ್ದೇನು..?

---Advertisement---

 

ಮೈಸೂರು: ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡುವುದಕ್ಕೆ ಡಿಕೆ ಶಿವಕುಮಾರ್ ಸಾಕಷ್ಟು ಸಲ ದೆಹಲಿಗೆ ಹೋಗಿದ್ದರು. ಆದರೂ ಭೇಟಿ ಆಗಿರಲಿಲ್ಲ. ತಮಿಳುನಾಡಿಗೆ ಹೋಗುವ ಮಾರ್ಗ ಮಧ್ಯೆ ಇಂದು ಮೈಸೂರಿನಲ್ಲಿ 15 ನಿಮಿಷಗಳ ಕಾಲ ರಾಹುಲ್ ಗಾಂಧಿ ಇದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಕೂಡ ಭೇಟಿಯಾಗಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೇ ಎಲ್ಲರ ಗಮನವನ್ನು ಸೆಳೆದಿದೆ.

 

ರಾಹುಲ್ ಗಾಂಧಿ ಅವರ ಬಳಿ ಡಿಕೆ ಶಿವಕುಮಾರ್ ಮಾತನಾಡಿದ್ದು ಏನು ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಯಾಕಂದ್ರೆ ರಾಹುಲ್ ಗಾಂಧಿ ಅವರ ಜೊತೆಗೆ ಡಿಕೆ ಶಿವಕುಮಾರ್ ಅವರು ಐದು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಈ ಐದು ನಿಮಿಷದಲ್ಲಿ ಅಷ್ಟೇನು ಮಾತನ್ನಾಡುವುದಕ್ಕೆ ಸಾಧ್ಯವಿಲ್ಲ ಎನಿಸುತ್ತೆ. ಹೀಗಾಗಿ ದೆಹಲಿ ಭೇಟಿಗೆ ಕಾಲವಕಾಶವನ್ನ ಕೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ / ಪುನರ್ ರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಮನ್ರೇಗಾ ಯೋಜನೆಯ ಬಗ್ಗೆಯೂ ಮಾತನ್ನಾಡಿದ್ದಾರೆ. ಬಳಿಕ ದೆಹಲಿಗೆ ಬರುವಂತೆ ಸೂಚನೆ ನೀಡಿದ ರಾಹುಲ್ ಗಾಂಧಿ ಅವರು, ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಈಗಾಗಲೇ ಅಸ್ಸಾಂ ಚುನಾವಣೆಯ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಹೆಗಲಿದೆ ಹೈಕಮಾಂಡ್ ಹಾಕಿದೆ. ರಾಜ್ಯದ ಸಿಎಂ ಚುಕ್ಕಾಣಿ ಹಿಡಿಯಬೇಕು ಎಂಬ ಹೆಬ್ಬಯಕೆ ಡಿಕೆ ಶಿವಕುಮಾರ್ ಅವರದ್ದು. ಭೇಟಿಯ ಬಳಿಕ ಆ ಬಗ್ಗೆ ಚರ್ಚೆ ನಡೆಸಬಹುದೇನೋ..?.

Join WhatsApp

Join Now

Join Telegram

Join Now